ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಆರ್ಭಟ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ 487 ಮಂದಿಗೆ ಡೆಂಗ್ಯೂ ಪಾಸಿಟಿವ್ ಅಂತ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಡೆಂಗ್ಯೂ ಪಾಸಿಟಿವ್ ಸಂಖ್ಯೆ 10 ಗಡಿದಾಟಿದೆ.
ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ 4,572 ಮಂದಿ ಡೆಂಗ್ಯೂ ಪತ್ತೆ ಪರೀಕ್ಷೆಗೆ ಒಳಗಾಗಿದ್ದಾರೆ. ಇವರಲ್ಲಿ 487 ಜನರಿಗೆ ಡೆಂಗ್ಯೂ ಪಾಸಿಟಿವ್ ಅಂತ ವರದಿಯ ಪರೀಕ್ಷೆಯಿಂದ ತಿಳಿದು ಬಂದಿರುವುದಾಗಿ ಹೇಳಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 283, ಬೆಂಗಳೂರು ನಗರದಲ್ಲಿ ಐವರು, ಬೆಂಗಳೂರು ಗ್ರಾಮಾಂತರದಲ್ಲಿ ಮೂವರು, ರಾಮನಗರ 1, ಕೋಲಾರ 3, ತುಮಕೂರು 18, ಚಿತ್ರದುರ್ಗ 10, ದಾವಣಗೆರೆ 12, ಶಿವಮೊಗ್ಗ 9, ವಿಜಯಪುರ 2, ಧಾರವಾಡ 17 ಜನರಿಗೆ ಡೆಂಗ್ಯೂ ದೃಢಪಟ್ಟಿದೆ.
ಹಾವೇರಿ 12, ಉತ್ತರ ಕನ್ನಡ 5, ಕಲಬುರ್ಗಿ 12, ಬೀದರ್ 3, ವಿಜಯನಗರ 5, ಕೊಪ್ಪಳ 3, ಮೈಸೂರು 4, ಚಾಮರಾಜನಗರ 3, ಮಂಡ್ಯ 6, ಹಾಸನ 26, ಉಡುಪಿ 12 ಸೇರಿದಂತೆ 487 ಜನರಿಗೆ ಡೆಂಗ್ಯೂ ಪಾಸಿಟಿವ್ ಅಂತ ತಿಳಿದು ಬಂದಿದೆ ಎಂದಿದೆ. ಹೀಗಾಗಿ ಡೆಂಗ್ಯೂ ಸೋಂಕಿತರ ಸಂಖ್ಯೆ 10,449ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದೆ.
ಇನ್ಮುಂದೆ ‘ಅಂಗಾಂಗ ದಾನಿ’ಗಳಿಗೆ ಸ್ವಾತಂತ್ರ್ಯ, ಗಣರಾಜ್ಯೋತ್ಸವ ದಿನದಂದು ‘ಪ್ರಶಂಸಾ ಪತ್ರ’ ನೀಡಿ ಗೌರವ
ಲೂಟಿಕೋರರ ಪಿತಾಮಹ ನೀನು: ವಿಧಾನಸಭೆಯಲ್ಲಿ ಅಶ್ವತ್ಥ್ ನಾರಾಯಣ ವಿರುದ್ಧ ಗುಡುಗಿದ ಡಿಸಿಎಂ ಡಿಕೆಶಿ