ಬೆಂಗಳೂರು: ಒಬ್ಬನೇ ವ್ಯಕ್ತಿಯಿಂದ ಬರೋಬ್ಬರಿ 476 ಮಾಹಿತಿ ಹಕ್ಕು ಅರ್ಜಿಗಳನ್ನು ಹಾಕಿದ್ದರು. ಹೀಗಾಗಿ ಮಾಹಿತಿ ಹಕ್ಕು ಆಯೋಗವು ಮತ್ತೆ ಅರ್ಜಿ ಸಲ್ಲಿಸದಂತೆ ನಿರ್ಬಂಧ ವಿಧಿಸಿತ್ತು. ಈ ನಿರ್ಬಂಧವನ್ನು ತೆರವಗೊಳಿಸುವಂತೆ ಕೋರಿ ಹೈಕೋರ್ಟ್ ಗೆ ಸಲ್ಲಿಸಿದ್ದಂತ ಅರ್ಜಿ ವಿಚಾರಣೆ ನಡೆಸಿದಂತ ಹೈಕೋರ್ಟ್ ನಿರ್ಬಂಧಕ್ಕೆ ತಡೆ ನೀಡಲು ನಕಾರ ವ್ಯಕ್ತಪಡಿಸಿದೆ.
ಕೆ.ದೇವಪ್ರಸಾದ್ ಎಂಬುವರು ಹೈಕೋರ್ಟ್ ಗೆ ಮಾಹಿತಿ ಹಕ್ಕು ಆಯೋಗದಿಂದ ಅರ್ಜಿ ಸಲ್ಲಿಸಲು ನಿರ್ಬಂಧ ವಿಧಿಸಿದೆ. 476 ಆರ್ ಟಿ ಐ ಅರ್ಜಿ ಸಲ್ಲಿಸಿದ್ದ ಕಾರಣಕ್ಕೆ ಮತ್ತೆ ಅರ್ಜಿ ಸಲ್ಲಿಸದಂತೆ ನಿರ್ಬಂಧ ವಿಧಿಸಲಾಗಿದೆ. ಮಾಹಿತಿ ಹಕ್ಕು ಆಯೋಗದ ಈ ನಿರ್ಬಂಧಕ್ಕೆ ತಡೆ ನೀಡುವಂತೆ ಹೈಕೋರ್ಟ್ ತಡೆ ನೀಡುವಂತೆ ಕೋರಿದ್ದರು.
ಒಬ್ಬನೇ ವ್ಯಕ್ತಿಯಿಂದ ಆರ್ ಟಿ ಐ ಅಡಿಯಲ್ಲಿ 476 ಅರ್ಜಿ ಸಲ್ಲಿಸಿದ್ದರ ಬಗ್ಗೆ ಹೈಕೋರ್ಟ್ ಅಚ್ಚರಿಯನ್ನು ವ್ಯಕ್ತಪಡಿಸಿತು. ಅಲ್ಲದೇ ಆರ್ ಟಿ ಐ ಅರ್ಜಿ ಸಲ್ಲಿಸದಂತೆ ನಿರ್ಬಂಧಿಸಿದ್ದ ಮಾಹಿತಿ ಹಕ್ಕು ಆಯೋಗದ ಆದೇಶಕ್ಕೆ ತಡೆ ನೀಡಲು ನಕಾರ ವ್ಯಕ್ತಪಡಿಸಿತು.
ಅಂದಹಾಗೇ ಕೆ.ದೇವಪ್ರಸಾದ್ ಆರ್ ಟಿ ಐ ದುರುಪಯೋಗ ಪಡಿಸಿಕೊಳ್ಳಲು ಅವಕಾಶ ನೀಡಲಾಗದು ಎಂಬುದಾಗಿ ಹೇಳುವ ಮೂಲಕ ಅರ್ಜಿಯ ವಿಚಾರಣೆಯನ್ನು ನವೆಂಬರ್.12ಕ್ಕೆ ಕರ್ನಾಟಕ ಹೈಕೋರ್ಟ್ ಮುಂದೂಡಿತು.
ಶಿವಮೊಗ್ಗದಲ್ಲಿ ‘HIV ನಿಯಂತ್ರಣ’ಕ್ಕೆ ಬೈಕ್ ಜಾಥಾ: DHO ಡಾ.ನಟರಾಜ್.ಕೆ ಎಸ್ ಚಾಲನೆ
BREAKING: ರಾಜ್ಯದ ‘ಪೊಲೀಸ್ ಇಲಾಖೆ’ಯಲ್ಲಿ ಖಾಲಿ ಇರುವ ‘2032 ಹುದ್ದೆ’ಗಳ ಭರ್ತಿಗೆ ಸರ್ಕಾರ ಆದೇಶ | JOB ALERT