ಬೆಂಗಳೂರು: ನಗರದಲ್ಲಿ ಭಾರೀ ಮಳೆಯಿಂದಾಗಿ ಅವಾಂತರವೇ ಉಂಟಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗಾಳಿ, ಮಳೆಗೆ 47 ಮರಗಳು ಧರೆಗುರುಳಿದ್ದರೇ, 57 ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದಾವೆ.
ಈ ಕುರಿತಂತೆ ಬಿಬಿಎಂಪಿಯಿಂದ ಮಾಹಿತಿ ನೀಡಲಾಗಿದ್ದು, ಬೆಂಗಳೂರಿನ ದಕ್ಷಿಣ ವಲಯದಲ್ಲಿ 40 ಮರಗಳು, ರಾಜರಾಜೇಶ್ವರಿ ನಗರದ ವ್ಯಾಪ್ತಿಯಲ್ಲಿ 4, ಬೊಮ್ಮನಹಳ್ಳಿಯಲ್ಲಿ 6, ಪಶ್ಚಿಮ ವಲಯದಲ್ಲಿ 5, ಮಹದೇವಪುರ ವಲಯದಲ್ಲಿ 6, ಯಲಹಂತ ಮತ್ತು ಪೂರ್ವ ವಲಯದಲ್ಲಿ ತಲಾ 7 ಮತ್ತು ದಾಸರಹಳ್ಳಿ ವಲಯದಲ್ಲಿ 2 ಸೇರಿದಂತೆ 47 ಮರಗಳು ಮಳೆಯಿಂದಾಗಿ ಧರೆಗೆ ಉರುಳಿದ್ದಾವೆ. ಇವುಗಳನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದೆ.
ಇನ್ನೂ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ ವಲಯದಲ್ಲಿ 20 ಮರದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ರಾಜರಾಜೇಶ್ವರಿ ನಗರ ವಲಯದಲ್ಲಿ 1, ಬೊಮ್ಮನಹಳ್ಳಿಯಲ್ಲಿ 8, ಪಶ್ಚಿಮದಲ್ಲಿ 7, ಮಹದೇವಪುರದಲ್ಲಿ 2, ಯಲಹಂಕ 5, ಪೂರ್ವ ವಲಯದಲ್ಲಿ 12 ಹಾಗೂ ದಾಸರಹಳ್ಳಿ ವಲಯದಲ್ಲಿ 2 ಸೇರಿದಂತೆ 57 ರೆಂಬೆ-ಕೊಂಬೆಗಳು ಮಳೆಯಿಂದ ಮುರಿದು ಬಿದ್ದಿದ್ದು, ಬಿಬಿಎಂಪಿ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.
ರೈಲ್ವೆ ಪ್ರಯಾಣಿಕರ ಗಮನಕ್ಕೆ: ರಾಮಗಿರಿ-ಬೀರೂರು ನಿಲ್ದಾಣಗಳಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ
ಬೆಂಗಳೂರಲ್ಲಿ ಭಾರೀ ಮಳೆ ಎಫೆಕ್ಟ್: ಎಲ್ಲೆಲ್ಲಿ ಏನೇನು ಅವಾಂತರ? ಇಲ್ಲಿದೆ ಪುಲ್ ಡೀಟೆಲ್ಸ್