ಶಿವಮೊಗ್ಗ: ಜಿಲ್ಲೆಯಲ್ಲಿ ದಿಢೀರ್ ಸುರಿದಂತ ಗುಡುಗು ಸಹಿತ ಭಾರೀ ಮಳೆಯ ಜೊತೆಗೆ ಸಿಡಿಲು ಬಡಿದು 41 ಮೇಕೆಗಳು ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ಕುಂಸಿ ಸಮೀಪ ನಡೆದಿದೆ.
ಶಿವಮೊಗ್ಗ ತಾಲ್ಲೂಕಿನ ಕುಂಸಿ ಸಮೀಪದ ಹೊಲದಲ್ಲಿ ಮೇಕೆಯನ್ನು ಮೇಯಿಸಲಾಗುತ್ತಿತ್ತು. ಗುಡುಗು ಸಹಿತ ಮಳೆ ಆರಂಭಗೊಂಡ ಹಿನ್ನಲೆಯಲ್ಲಿ ಬಾಳೆಕೊಪ್ಪ ಗ್ರಾಮದಿಂದ ಮೂರು ಕಿಲೋಮೀಟರ್ ದೂರದಲ್ಲಿದ್ದಂತ ಕರಿಬಸಜ್ಜಯ್ಯ ಸ್ಸಾವಮಿ ದೇವಾಲಯದ ಬಳಿಯಲ್ಲಿ ಮೇಕೆಗಳನ್ನು ಮರದಡಿ ನಿಲ್ಲಿಸಿಕೊಂಡು ಹುಚ್ಚಪ್ಪ ಎಂಬುವರು ನಿಂತಿದ್ದರು.
ಈ ಸಂದರ್ಭದಲ್ಲಿ ಸಿಡಿಲು ಬಡಿದ ಪರಿಣಾಮ, 41 ಮೇಕೆಗಳು ಸಾವನ್ನಪ್ಪಿದ್ದರೇ, ಮೇಕೆ ಕಾಯುತ್ತಿದ್ದಂತ ಹುಚ್ಚಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಂದಹಾಗೇ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಧಿಕಾರಿಗಳು ಪರಿಶೀಲನೆ ನಡೆಸಿದರು. 15 ಮೇಕೆಗಳು ಒಂದರಿಂದ ಮೂರು ವರ್ಷದವುಗಳಾಗಿದ್ದರೇ, ಉಳಿದವು ಮೂರರಿಂದ ಆರು ವರ್ಷದ್ದವು. 21 ಮೇಕೆಗಳು ಗರ್ಭಧರಿಸಿದ್ದವು. ಇವೆಲ್ಲವೂ ಸಾವನ್ನಪ್ಪಿದ್ದಾರೆ. ಇವುಗಳ ಜೊತೆಗೆ ಎರಡು ನಾಯಿಗಳು ಸಹ ಸಾವನ್ನಪ್ಪಿದ್ದಾವೆ ಎಂಬ ಮಾಹಿತಿ ನೀಡಿದ್ದಾರೆ.
BREAKING: ರಾಜ್ಯದಲ್ಲೊಂದು ‘ಹೃದಯ ವಿದ್ರಾವಕ’ ಘಟನೆ: ಔಷಧಿ ಕೊರತೆಯಿಂದ ‘ಸರ್ಕಾರಿ ಆಸ್ಪತ್ರೆ’ಯಲ್ಲಿ ಮಗು ಸಾವು
BIG NEWS: ಹುಬ್ಬಳ್ಳಿ ಬಾಲಕಿ ಹತ್ಯೆ ಕೇಸ್: ಎನ್ ಕೌಂಟರ್ ಗೆ ಬಲಿಯಾದ ರಿತೇಶ್ ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್ ಆದೇಶ