ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘಕ್ಕೆ ನವೆಂಬರ್ 9ರಂದು ನಡೆಯಲಿರುವ ಚುನಾವಣೆಗೆ ಅಖಾಡ ಸಜ್ಜಾಗಿದ್ದು, ಉಮೇದುವಾರಿಕೆಯನ್ನು ಹಿಂಪಡೆಯಲು ಕೊನೆಯ ದಿನವಾದ ಇಂದು 41 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
ಈ ಕುರಿತು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ವಿ.ನಂಜುಂಡಪ್ಪ ಮಾಹಿತಿ ನೀಡಿದ್ದು, ಒಟ್ಟು 25 ಸ್ಥಾನಗಳ ಪೈಕಿ 3 ಕಾರ್ಯದರ್ಶಿ ಹುದ್ದೆಗಳಿಗೆ ಕೆ. ಹರೀಶ್, ಕೆ ಎಲ್ ಲೋಕೇಶ್, ಗೋದಾವರಿ ಡಿ ಎಸ್ ಅವರು ಕಣದಲ್ಲಿ ಉಳಿದಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಎಸ್.ಸೋಮಶೇಖರ್ (ಗಾಂಧಿ), ಮು. ವೆಂಕಟೇಶಯ್ಯ, ಎ. ಬಿ. ಶಿವರಾಜ್ ಅವರು ಸ್ಪರ್ಧೆಯಲ್ಲಿದ್ದಾರೆ. 3 ಉಪಾಧ್ಯಕ್ಷ ಸ್ಥಾನಗಳಿಗೆ ಡಾ. ಕೆ. ಎಸ್. ಸ್ವಾಮಿ, ಎಚ್ ಕೆ ಬಸವರಾಜ್, ಬಿ. ಟಿ ಶ್ರೀನಿವಾಸ್, ಪರಿಮಳ ಎಚ್ಎಸ್, ಕೆ ಎಂ. ಜಕ್ರಿಯ ಕಣದಲ್ಲಿದ್ದಾರೆ.
ಪ್ರಧಾನ ಕಾರ್ಯ ದರ್ಶಿ ಸ್ಥಾನಕ್ಕೆ ಕೆ.ಸಿ. ವೇದಮೂರ್ತಿ, ಎನ್ ಶ್ರೀನಾಥ್, ಆರ್ ಜಯಕುಮಾರ್, ಖಜಾಂಚಿ ಸ್ಥಾನಕ್ಕೆ ಎಸ್ ಡಿ. ಚಿಕ್ಕಣ್ಣ, ಟಿ. ಮೋಹನ್, ರಾಜ್ಯ ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ಎಂ ಪಿ ಶರತ್ ಚಂದ್ರ, ಎಚ್ ಆರ್ ರವೀಶ್, ಕೆ.ವಿ.ಪರಮೇಶ್ ಕಣದಲ್ಲಿ ಉಳಿದಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಕಾರ್ಯಕಾರಿ ಸಮಿತಿಯ 15 ಸ್ಥಾನಗಳಿಗೆ ಸುಂದರೇಶ್ ಬಿ ಕೆ, ರಮಾಕಾಂತ್ ಗುಗ್ರಿ, ಎನ್ ಶಿವಾನಂದ್ ಆರ್ ರಾಜಗಿರಿ ಪ್ರದೀಪ್, ಹೋಮೇಶ್ ಮೂರ್ತಿ, ಎಸ್.ಶ್ಯಾಮ, ಕೃಷ್ಣೇಗೌಡ, ಗಂಗರಾಜು, ಲಿಂಗರಾಜು ಡಿ ನೊಣವಿನಕೆರೆ, ಎಸ್. ಎಮ್. ಕೃಷ್ಣ, ಶರಣಬಸಪ್ಪ, ಚನ್ನವೀರಪ್ಪ ಜಿಆರ್, ಬಿ ಎನ್.ರಾಮಚಂದ್ರ, ಮಂಜುನಾಥ್ ನೀಲೆಸೊಗೆ, ಹನುಮಂತರಾಜು ಬಿಕೆ, ರವಿಕಾಂತ್ ಕುಂದಾಪುರ, ನಟರಾಜ್ ಬಿಪಿ, ಗಂಡಸಿ ಸದಾನಂದ ಸ್ವಾಮಿ, ಈ ಬಸವರಾಜು, ಡಿ ಎಲ್ ಹರೀಶ್, ಮೋಹನ್ ಕುಮಾರ್ ಬಿ ಎನ್ ಹಾಗೂ ಗಗನ್ ಕುಮಾರ್ ಎ ವಿ ಸೇರಿ 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
BREAKING: ಬೆಂಗಳೂರಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ, ಇಬ್ಬರು ಸಾವು
‘ಬೆಂಗಳೂರು ಗ್ರಾಮಾಂತರ ಸರ್ಕಾರಿ ನೌಕರರ ಸಂಘ’ದ ಜಿಲ್ಲಾಧ್ಯಕ್ಷರಾಗಿ ‘ಕೆ.ಹನುಮಂತರಾಯಪ್ಪ’ ಆಯ್ಕೆ








