ಬೆಂಗಳೂರು: 402 ಪೊಲೀಸ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆಯು ಕೆಲ ದಿನಗಳ ಹಿಂದೆಯೇ ನಡೆಯಬೇಕಿತ್ತು. ಆದರೇ ಎರಡು ಪರೀಕ್ಷೆಗಳು ಒಂದೇ ದಿನ ನಿಗದಿಯಾಗಿದ್ದರಿಂದ ಮುಂದೂಡಿಕೆ ಮಾಡಲಾಗಿತ್ತು. ಈ ಪರೀಕ್ಷೆ ಅಕ್ಟೋಬರ್.3ರಂದು ನಡೆಯಲಿದೆ. ಇಂತಹ ಪರೀಕ್ಷೆಗೆ ಕೆಇಎಯಿಂದ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಅಕ್ಟೋಬರ್ 3ರಂದು ನಡೆಯುವ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ (PSI) ಪರೀಕ್ಷೆ ಗೆ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ವೆಬ್ ಸೈಟ್ ನಲ್ಲಿ ಲಿಂಕ್ ಬಿಡುಗಡೆ ಮಾಡಲಾಗಿದೆ. ಅರ್ಹರು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಅಕ್ಟೋಬರ್ 3ರಂದು ನಡೆಯುವ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ (#PSI) ಪರೀಕ್ಷೆ ಗೆ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ವೆಬ್ ಸೈಟ್ ನಲ್ಲಿ ಲಿಂಕ್ ಬಿಡುಗಡೆ ಮಾಡಲಾಗಿದೆ. ಅರ್ಹರು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು #KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.@CMofKarnataka@drmcsudhakar
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) (@KEA_karnataka) September 27, 2024
ಪ್ರವೇಶ ಪತ್ರವನ್ನು ಈ ರೀತಿ ಡೌನ್ ಲೋಡ್ ಮಾಡಿಕೊಳ್ಳಿ
- 402 ಪಿಎಸ್‌ಐ ಹುದ್ದೆ ಪರೀಕ್ಷೆ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಲು https://cetonline.karnataka.gov.in/hallticket_va/forms/HALLTICKET.aspx ಕ್ಕೆ ಭೇಟಿ ನೀಡಿ.
- ತೆರೆದ ವೆಬ್‌ಪೇಜ್‌ನಲ್ಲಿ ಪಿಎಸ್‌ಐ ಪರೀಕ್ಷೆ ಆಯ್ಕೆ ಮಾಡಿ.
- ನಿಮ್ಮ ಅಪ್ಲಿಕೇಶನ್ ನಂಬರ್ ನಮೂದಿಸಿ.
- ಆನಂತರ ಅಭ್ಯರ್ಥಿಗಳು ತಮ್ಮ ಹೆಸರಿನ ಮೊದಲ 4 ಅಕ್ಷರಗಳನ್ನು ನಮೂದಿಸಿ.
- ‘Submit’ ಎಂದಿರುವಲ್ಲಿ ಕ್ಲಿಕ್ ಮಾಡಿ.
- ಪ್ರವೇಶ ಪತ್ರ ಪ್ರದರ್ಶಿತವಾಗುತ್ತದೆ. ಡೌನ್‌ಲೋಡ್ ಮಾಡಿ, ಪ್ರಿಂಟ್ ತೆಗೆದುಕೊಳ್ಳಿ.
- ಈ ಬಳಿಕ ಪ್ರವೇಶ ಪತ್ರದಲ್ಲಿನ ಸೂಚನೆಗಳನ್ನು ತಪ್ಪದೇ ಓದಿಕೊಳ್ಳಿರಿ.
ಹೀಗಿದೆ 402 ಪಿಎಸ್‌ಐ ಪರೀಕ್ಷೆ ವೇಳಾಪಟ್ಟಿ
ಪರೀಕ್ಷೆ ದಿನಾಂಕ : 03-09-2024
ಪತ್ರಿಕೆ-1 (50 ಅಂಕಗಳಿಗೆ) : 10-30 am To pm.
ಪತ್ರಿಕೆ-2 (150 ಅಂಕಗಳಿಗೆ) : 12-30 pm To 2-00 pm.
ದ್ವಿತೀಯ PUC 3ನೇ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಹತ್ವದ ಮಾಹಿತಿ: ‘Option’ ದಾಖಲಿಸಲು ಲಿಂಕ್ ಬಿಡುಗಡೆ
ಅತ್ಯಾಚಾರ ಆರೋಪ ಪ್ರಕರಣ: ಶಾಸಕ ಮುನಿರತ್ನಗೆ ಸೇರಿದ 11 ಕಡೆ ‘SIT’ ದಾಳಿ, ಮಹತ್ವದ ದಾಖಲೆ ವಶಕ್ಕೆ