ರಾಜ್ ಕೋಟ್ :ರಾಜ್ಕೋಟ್ನ ಗೊಂಡಾಲ್ ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ ಮನೆ ಕುಸಿದು 40 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಕುಟುಂಬದ ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಉಷಾ ಸುನಿಲ್ ವರ್ಧನಿ ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಗುರುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಎರಡು ಅಂತಸ್ತಿನ ಮನೆ ಕುಸಿದು ವರ್ಧನಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಷಯದಲ್ಲಿ ಆಕಸ್ಮಿಕ ಸಾವಿನ ವರದಿಯನ್ನು ದಾಖಲಿಸಲಾಗಿದೆ ಎಂದು ಗೊಂಡಾಲ್ ಬಿ ವಿಭಾಗದ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಹಜಾನಂದ್ ನಗರದಲ್ಲಿರುವ ಈ ಮನೆ ನವೀಕರಣ ಹಂತದಲ್ಲಿದ್ದಾಗ ಅದರ ನಿವಾಸಿಗಳ ಮೇಲೆ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯಲ್ಲಿ ಉಷಾ ಅವರ ಪತಿ ಸುನಿಲ್ ವರ್ಧನಿ (41) ಮತ್ತು ಅತ್ತೆ ನೀತಾ ವರ್ಧನಿ (70) ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ