ಪುಣೆ:ಐಟಿ ಪಾರ್ಕ್ನ ಹಂತ 1 ರಲ್ಲಿರುವ ಹಿಂಜೇವಾಡಿ ಇಂಡಸ್ಟ್ರೀಸ್ ಅಸೋಸಿಯೇಷನ್ ಕಚೇರಿ ಬಳಿ ಬೆಳಿಗ್ಗೆ 7.30 ರ ಸುಮಾರಿಗೆ ಅವರ ವಾಹನಕ್ಕೆ ಬೆಂಕಿ ಕಾಣಿಸಿಕೊಂಡಿದೆ.
ಪುಣೆಯ ಹಿಂಜೇವಾಡಿ ಐಟಿ ಪಾರ್ಕ್ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಕಂಪನಿಯ ಉದ್ಯೋಗಿಗಳನ್ನು ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವೆಲರ್ ಗೆ ಬೆಂಕಿ ತಗುಲಿ ನಾಲ್ವರು ಸಾವನ್ನಪ್ಪಿದ್ದಾರೆ.ಹತ್ತು ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬೆಳಿಗ್ಗೆ 7.30 ರ ಸುಮಾರಿಗೆ ಐಟಿ ಪಾರ್ಕ್ನ ಹಂತ 1 ರಲ್ಲಿರುವ ಹಿಂಜೇವಾಡಿ ಇಂಡಸ್ಟ್ರೀಸ್ ಅಸೋಸಿಯೇಷನ್ ಕಚೇರಿ ಬಳಿ ವಾಹನಕ್ಕೆ ಬೆಂಕಿ ಕಾಣಿಸಿಕೊಂಡಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಟೆಂಪೊ ಟ್ರಾವೆಲರ್ ಒಳಗೆ ವ್ಯೋಮಾ ಗ್ರಾಫಿಕ್ಸ್ ಕಂಪನಿಯ 14 ಉದ್ಯೋಗಿಗಳಿದ್ದರು.
“ವಾಹನವು ಚಲಿಸುತ್ತಿದ್ದಾಗ ಚಾಲಕನ ಸೀಟಿನ ಬಳಿ ಬೆಂಕಿ ಕಾಣಿಸಿಕೊಂಡಿತು ಮತ್ತು ಚಾಲಕ ವಾಹನದಿಂದ ಹೊರಗೆ ಹಾರಿದನು. ಎಂಟು ಜನರು ಹೊರಬರಲು ಸಾಧ್ಯವಾಯಿತು ಮತ್ತು ತಪ್ಪಿಸಿಕೊಳ್ಳಲು ಸಾಧ್ಯವಾಗದ ನಾಲ್ವರು ಸುಟ್ಟ ಗಾಯಗಳಿಗೆ ಬಲಿಯಾದರು. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಹಿಂಜೇವಾಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕನ್ಹಯ್ಯ ಥೋರಟ್ ಹೇಳಿದ್ದಾರೆ.
ಚಾಲಕ ಹೊರಗೆ ಹಾರಿದ್ದರಿಂದ ವಾಹನವು ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಹಿಂಜೇವಾಡಿಯ ರೂಬಿ ಹಾಲ್ ಕ್ಲಿನಿಕ್ ನ ತುರ್ತು ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಈ ಪೈಕಿ ಇಬ್ಬರು ವ್ಯಕ್ತಿಗಳಿಗೆ ಶೇ.40ರಷ್ಟು ಸುಟ್ಟ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ, ಒಬ್ಬರಿಗೆ ಶೇ.20ರಷ್ಟು ಸುಟ್ಟ ಗಾಯಗಳಾಗಿದ್ದರೆ, ಇನ್ನೊಬ್ಬರಿಗೆ ಶೇ.5ರಷ್ಟು ಸುಟ್ಟ ಗಾಯಗಳಾಗಿವೆ.