ಬೆಂಗಳೂರು : ಪ್ರತಿ ವರ್ಷ ಕನ್ನಡಿಗರ ಬೆವರಗಳಿಕೆಯ ರೂ. 4.30 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವ ಕೇಂದ್ರ ಸರ್ಕಾರ ನಮಗೆ ವಾಪಾಸು ಕೊಟ್ಟಿರುವುದು ಕೇವಲ 50,257 ಕೋಟಿ ರೂಪಾಯಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಅಂದರೆ ನಾವು 100 ರೂಪಾಯಿ ತೆರಿಗೆ ಪಾವತಿ ಮಾಡಿದರೆ ನಮಗೆ 12 ರಿಂದ 13 ರೂಪಾಯಿ ಮರಳಿ ಬರುತ್ತಿದೆ. ಕರ್ನಾಟಕಕ್ಕೆ ಜಿಎಸ್ಟಿಯಲ್ಲಿ, ವಿಶೇಷ ಅನುದಾನದಲ್ಲಿ, ಬರ ಪರಿಹಾರದಲ್ಲಿ, ಭದ್ರಾ ಮೇಲ್ದಂಡೆ ಯೋಜನೆಯ ಅನುದಾನದಲ್ಲಿ, ಗೃಹನಿರ್ಮಾಣ ಯೋಜನೆಯಲ್ಲಿ, ಅನ್ನಭಾಗ್ಯದ ಅಕ್ಕಿಯಲ್ಲಿ ಹೀಗೆ ಸಾಲು ಸಾಲು ಅನ್ಯಾಯವಾಗಿದೆ.
ಈ ಅನ್ಯಾಯದ ವಿರುದ್ಧ ಪ್ರತಿಯೊಬ್ಬ ಕನ್ನಡಿಗನು ದನಿ ಎತ್ತಬೇಕಾಗಿದೆ. ಇದು ಕನ್ನಡಿಗರಾದ ನಮ್ಮೆಲ್ಲರ ಸ್ವಾಭಿಮಾನದ ಪ್ರಶ್ನೆಯೂ ಹೌದು ಎಂದು ಹೇಳಿದ್ದಾರೆ.