ಬೆಂಗಳೂರು: ನಾಳೆ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಬಿಗ್ ಬಾಸ್ ಕನ್ನಡ ಸೀಜನ್ 12 ಅನ್ನು ಗೆದ್ದ ಅಭ್ಯರ್ಥಿಗಳನ್ನು ಘೋಷಣೆ ಕೂಡ ಮಾಡಲಾಗುತ್ತಿದೆ.
ಇಂದು ಹಾಗೂ ನಾಳೆ ಎರಡು ದಿನ ನೆಚ್ಚಿನ ಅಭ್ಯರ್ಥಿಯ ಬಗ್ಗೆ ವೋಟ್ ಮಾಡೋದಕ್ಕೆ ಆನ್ ಲೈನ್ ಮೂಲಕ ಅವಕಾಶ ನೀಡಲಾಗಿದೆ.
ಬಿಗ್ ಬಾಸ್ ಕನ್ನಡ ಸೀಜನ್ 12ರಲ್ಲಿ ಆರು ಮಂದಿ ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಗೆ ಕಾಲಿಟ್ಟಿದ್ದು, ಇವರಲ್ಲಿ ಓರ್ವ ವಿನ್ನರ್ ಆದರೇ, ಓರ್ವ ರನ್ನರ್ ಅಪ್ ಆಗಲಿದ್ದಾರೆ. ಅವರಲ್ಲಿ ಯಾರು ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಬಿಬಿಕೆ12ರಲ್ಲಿ ಅಶ್ವಿನಿಗೌಡ, ಗಿಲ್ಲಿ, ರಕ್ಷಿತಾ ಶೆಟ್ಟಿ, ರಘು, ಕಾವ್ಯ ಹಾಗೂ ಧನುಷ್ ಫೈನಲ್ ಲೀಸ್ಟ್ ನಲ್ಲಿ ಇದ್ದಾರೆ. ತೀವ್ರ ಪೈಪೋಟಿಯ ನಡುವೆ ನಾಳೆ ಗ್ರ್ಯಾಂಡ್ ಫಿನಾಲೆಯಲ್ಲಿ ಇವರಲ್ಲಿ ಯಾರು ವಿನ್ನರ್, ಯಾರು ರನ್ನರ್ ಅಪ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದ ನಂತ್ರ 1.53 ಲಕ್ಷ ಕೋಟಿ ಹೊಸ ಹೂಡಿಕೆ ಆಕರ್ಷಣೆ: ಸಚಿವ ಎಂ ಬಿ ಪಾಟೀಲ








