ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಜೂನ್.11, 2023ರಂದು ಆರಂಭಗೊಂಡಂತ ಶಕ್ತಿ ಯೋಜನೆಯಡಿ ಇದುವರೆಗೆ 601.84 ಕೋಟಿ ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ.
ಈ ಕುರಿತಂತೆ ಕೆ ಎಸ್ ಆರ್ ಟಿಸಿ ಮಾಹಿತಿ ಹಂಚಿಕೊಂಡಿದ್ದು, ನಿಗಮವು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ʼಶಕ್ತಿ ಯೋಜನೆ – ಮಹಿಳಾ ಉಚಿತ ಪ್ರಯಾಣʼ ವನ್ನು ಜೂನ್-2023ರ 11ನೇ ದಿನಾಂಕದಂದು ಚಾಲನೆ ಮಾಡಿ ಜಾರಿಗೊಳಿಸಿದ್ದು ಮಹಿಳಾ ಸಬಲೀಕರಣದತ್ತ ಸರ್ಕಾರದ ದಿಟ್ಟ ನಡೆಗೆ ಪೂರಕವಾಗಿ ನಿಗಮವು ಸಾರಿಗೆ ಸೇವೆಯನ್ನು ಒದಗಿಸುತ್ತಿದೆ. ಈ ಯೋಜನೆಯು ಜಾರಿಯಾದಾಗಿನಿಂದ ರಾಜ್ಯದ ಸುಮಾರು 350.90 ಕೋಟಿ ಮಹಿಳೆಯರು ಈ ಯೋಜನೆಯನ್ನು ಸದುಪಯೋಗ ಪಡೆದಿರುತ್ತಾರೆ ಎಂದಿದೆ.
ಶಕ್ತಿ ಯೋಜನೆಯಡಿ ಇಂದಿನವರೆಗೂ (15.12.2024) ಒಟ್ಟು 601.84 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, ಈ ಪೈಕಿ 350.90 ಕೋಟಿ ಮಹಿಳಾ ಪ್ರಯಾಣಿಕರಾಗಿರುತ್ತಾರೆ. ಅಂದರೆ, ಶೇ.58.30 ರಷ್ಟು ಮಹಿಳೆಯರು ಪ್ರಯಾಣಿಸಿರುತ್ತಾರೆ. ಮಹಿಳಾ ಪ್ರಯಾಣಿಕರ ಶೂನ್ಯ ಟಿಕೇಟ್ ಮೌಲ್ಯ ರೂ.8481.67 ಕೋಟಿಗಳಾಗಿರುತ್ತದೆ ಎಂದು ತಿಳಿಸಿದೆ.
ಅಂದಹಾಗೆ ದಿನಾಂಕ 15-12-2024ರವರೆಗೆ ಕೆ ಎಸ್ ಆರ್ ಟಿಸಿ ಬಸ್ಸಿನಲ್ಲಿ 106,12,22,913 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದರ ಮೌಲ್ಯ ರೂ.3202,80,05,100 ಆಗಿದೆ. ಬಿಎಂಟಿಸಿ ಬಸ್ಸಿನಲ್ಲಿ 111,75,82,281 ಮಹಿಳೆಯರು ಪ್ರಯಾಣಿಸಿದ್ದರೇ ಇದಕ್ಕಾಗಿ 1464,51,88,671 ಹಣ ಖರ್ಚು ಮಾಡಲಾಗಿದೆ. NWKRTCಯಲ್ಲಿ 81,53,47,194 ಮಹಿಳೆಯರು ಪ್ರಯಾಣಿಸಿದ್ದು, ಇವರ ಟಿಕೆಟ್ ಮೌಲ್ಯ 2090,52,30,547 ಆಗಿದೆ. KKRTC ಬಸ್ಸಿನಲ್ಲಿ 51,48,74,048 ಮಹಿಳೆಯರು ಪ್ರಯಾಣಿಸಿದ್ದರೇ, 1723,83,56,263 ರೂ ಟಿಕೆಟ್ ಮೌಲ್ಯವಾಗಿದೆ.
ಒಟ್ಟಾರೆಯಾಗಿ ಶಕ್ತಿ ಯೋಜನೆ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ 350,90,26,436 ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಇವರ ಟಿಕೆಟ್ ಮೌಲ್ಯ ರೂ.8481,67,80,581 ಆಗಿರುತ್ತದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ALERT : ಸಾರ್ವಜನಿಕರೇ ಎಚ್ಚರ : ಮೊಬೈಲ್ ನಲ್ಲಿ ಈ `ಗೇಮ್’ ಆಡಿದ್ರೆ ನಿಮ್ಮ ಖಾತೆಯಲ್ಲಿ ಹಣ ಖಾಲಿಯಾಗೋದು ಗ್ಯಾರಂಟಿ.!