ದಾವಣಗೆರೆ: ಜಿಲ್ಲೆಯ ಫಲವನಹಳ್ಳಿ ಅರಣ್ಯ ವಲಯದಲ್ಲಿ ಬರೋಬ್ಬರಿ 32 ನಾಡಬಾಂಬ್ ಪತ್ತೆಯಾಗಿದ್ದಾವೆ. ಈ ಮೂಲಕ ಸಾರ್ವಜನಿಕರನ್ನು ಬೆಚ್ಚಿ ಬೀಳುವಂತೆ ಮಾಡಿದ್ದಾವೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿ ಅರಣ್ಯ ವಲಯದಲ್ಲಿ 32 ನಾಡಬಾಂಬ್ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಫಲವನಹಳ್ಳಿ ಉಪ ವಲಯ ಅರಣ್ಯಾಧಿಕಾರಿ ಬರ್ಕತ್ ಆಲಿಯವರು ಗಸ್ತು ತಿರುಗುವ ಸಂದರ್ಭದಲ್ಲಿ ಈ ನಾಡ ಬಾಂಬ್ ಪತ್ತೆಯಾಗಿದ್ದಾವೆ. ಪತ್ತೆಯಾದ ನಾಡಬಾಂಬ್ ಅನ್ನು ಕಾಡು ಪ್ರಾಣಿಗಳನ್ನು ಬೇಟೆಯಾಡಲು ಇರಿಸಲಾಗಿತ್ತು ಎನ್ನಲಾಗುತ್ತಿದೆ.
ಇನ್ನೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳುತ್ತಿದ್ದಂತೆ 4 ಜನ ಆರೋಪಿಗಳು 2 ಬೈಕ್ ಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವಂತ ನ್ಯಾಮತಿ ಠಾಣೆಯ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮೃತ ಅಯ್ಯ ಮಾಲಾಧಾರಿ ಕುಟುಂಬಸ್ಥರನ್ನು ಭೇಟಿಯಾದ ಸಚಿವ ಸಂತೋಷ್ ಲಾಡ್, ಸಾಂತ್ವಾನ
BIG NEWS : ರಾಜ್ಯದ ಕಾರ್ಮಿಕರೇ ಗಮನಿಸಿ : `ಮದುವೆ ಸಹಾಯಧನ’ ಪಡೆಯಲು ಅರ್ಜಿ ಆಹ್ವಾನ.!