ಬೆಂಗಳೂರು: ಒಂದೆಡೆ ಶೇ.49ರಷ್ಟು ಟಿಕೆಟ್ ದರ ಹೆಚ್ಚಳ ಮಾಡಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂ ಆರ್ ಸಿಎಲ್ ಬಿಗ್ ಶಾಕ್ ನೀಡಿದೆ. ಇಂದಿನಿಂದ ಪರಿಷ್ಕೃತ ದರ ಜಾರಿಗೊಂಡಿದೆ. ಈ ನಡುವೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ 2ನೇ ಸಿಗ್ನಲಿಂಗ್ ಪರೀಕ್ಷೆ ಪೂರ್ಣಗೊಂಡಿದೆ.
ಈ ಕುರಿತಂತೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದ್ದು, ಹಳದಿ ಮಾರ್ಗಕ್ಕೆ ಇದು ಎರಡನೇ ರೈಲು ಸೆಟ್ ನಡೆಯುತ್ತಿದೆ. ಬಹು ಇತರೆ ರೈಲು ಪರೀಕ್ಷೆಗಳಲ್ಲಿ ಕೊನೆಯ ಸಿಗ್ನಲಿಂಗ್ ಪರೀಕ್ಷೆ ನಡೆಸಬೇಕಾಗಿದೆ. TS#2ಕ್ಕೆ ಸಿಗ್ನಲಿಂಗ್ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ, ಮಾರ್ಚ್ ಮೊದಲ ವಾರದಿಂದ ಇತರೆ ರೈಲು ಪರೀಕ್ಷೆಗಳು ಪ್ರಾರಂಭಿಸಲಾಗುವುದು ಎಂದಿದೆ.
ಇನ್ನೂ ಮೂರನೇ ರೈಲು ಸೆಟ್ ಮಾರ್ಚ್ 2025 ರ ಅಂತ್ಯದಲ್ಲಿ ಬರುವ ನಿರೀಕ್ಷೆ ಇದೆ. ಆ ಬಳಿಕ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ವಾಣಿಜ್ಯ ರೈಲು ಸಂಚಾರ ಆರಂಭದ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
ಬೆಂಗಳೂರು ಜನತೆ ಗಮನಕ್ಕೆ: ಫೆ.10ರ ನಾಳೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
BREAKING : ಹುಬ್ಬಳ್ಳಿಯಲ್ಲಿ ನಟೋರಿಯಸ್ ರೌಡಿಶೀಟರ್ `ಸೈಂಟಿಸ್ಟ್ ಮಂಜ್ಯಾ’ ಸೇರಿ ಮೂವರು ಅರೆಸ್ಟ್.!