ಬೆಂಗಳೂರು: ಎಂ.ಎಸ್ಸಿ. (ನರ್ಸಿಂಗ್). ಎಂಪಿಟಿ, ಎಂ.ಎಸ್ಸಿ. ಎ.ಎಚ್.ಎಸ್., ಪಿಬಿ ಬಿ.ಎಸ್ಸಿ. (ನರ್ಸಿಂಗ್). ಬಿ.ಎಸ್ಸಿ. ಎ.ಎಚ್.ಎಸ್. (ಲ್ಯಾಟರಲ್ ಎಂಟ್ರಿ) ಕೋರ್ಸುಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅ.30ರ ಮಧ್ಯಾಹ್ನ 3ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ತಾತ್ಕಾಲಿಕ ಸೀಟು ಹಂಚಿಕೆಯ ಫಲಿತಾಂಶವನ್ನು ಅ.30ರ ರಾತ್ರಿ 8ರ ನಂತರ ಹಾಗೂ ಅಂತಿಮ ಸೀಟು ಹಂಚಿಕೆಯ ಫಲಿತಾಂಶವನ್ನು ಅ.31ರ ಬೆಳಿಗ್ಗೆ 11 ನಂತರ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಶುಲ್ಕ ಪಾವತಿ ಹಾಗೂ ಸೀಟು ಖಾತರಿ ಚೀಟಿ ಡೌನ್ ಲೋಡ್ ಮಾಡಿಕೊಳ್ಳಲು ನ.1ರಿಂದ ನ.5ರ ಸಂಜೆ 4ರವರೆಗೆ ಅವಕಾಶವಿರುತ್ತದೆ. ಹಿಂದಿನ ಸುತ್ತಿನಲ್ಲಿ ಶುಲ್ಕ ಪಾವತಿಸಿದ್ದರೆ ಈ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಸೀಟು ಹಂಚಿಕೆಯಾದವರು ನ.5ರ ಸಂಜೆ 6ರೊಳಗೆ ಆಯಾ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು ಎಂದು ವಿವರಿಸಿದ್ದಾರೆ.
ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದಲ್ಲಿ ಅಥವಾ ಮೊದಲ ಸುತ್ತಿನಲ್ಲಿ ಹಂಚಿಕೆಯಾಗಿರುವ ಸೀಟು ದೃಢಪಟ್ಟಲ್ಲಿ ಯಾವುದೇ ಕಾರಣಕ್ಕೂ ಬದಲಿಸಿಕೊಳ್ಳಲು ಅಥವಾ ರದ್ದುಪಡಿಸಿಕೊಳ್ಳಲು ಅವಕಾಶ ಇರುವುದಿಲ್ಲ. ಹೀಗಾಗಿ, ಅಭ್ಯರ್ಥಿಗಳು ಇಚ್ಛೆ/ಆಯ್ಕೆಗಳನ್ನು ದಾಖಲಿಸುವ ಮುನ್ನ ಪೋಷಕರೊಡನೆ ಚರ್ಚಿಸಿ ನಮೂದಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
‘ರೈಲ್ವೆ ಪ್ರಯಾಣಿಕ’ರ ಗಮನಕ್ಕೆ: ಈ ಮಾರ್ಗದಲ್ಲಿ ‘ರೈಲುಗಳ ಸಂಚಾರ’ ಪುನರಾರಂಭ
‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’ಯಿಂದಾಗಿ ಪರಿಸರ, ಜೀವ ವೈವಿಧ್ಯತೆ ನಾಶ: ರೈತ ಮುಖಂಡ ದಿನೇಶ್ ಶಿರವಾಳ








