ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೋವಿಡ್ ಸೋಂಕಿನ ಸಂಖ್ಯೆ ಏರಿಕೆಯಾಗಿದೆ. ಇಂದು 297 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ 1,136ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ( Karnataka Health and Family Welfare Department ) ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಕಳೆದ 24 ಗಂಟೆಯಲ್ಲಿ RTPC ಮೂಲಕ 6,548 ಹಾಗೂ RAT ಮೂಲಕ 808 ಸೇರಿದೆತ 7,356 ಮಂದಿಯನ್ನು ಕೋವಿಡ್ ಸೋಂಕು ಪತ್ತೆ ಪರೀಕ್ಷೆಗೆ ( Covid19 Test ) ಒಳಪಡಿಸಲಾಗಿದೆ ಅಂತ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗದಂತ 7,356ರಲ್ಲಿ ಬೆಂಗಳೂರು ನಗರ 171, ಬಾಗಲಕೋಟೆ 05, ಬಳ್ಳಾರಿ 06, ಬೆಂಗಳೂರು ಗ್ರಾಮಾಂತರ 12, ಚಾಮರಾಜನಗರ 02, ಚಿಕ್ಕಬಳ್ಳಾಪುರ 05, ಚಿತ್ರದುರ್ಗ 05, ದಕ್ಷಿಣ ಕನ್ನಡ 06, ದಾವಣಗೆರೆ 01, ಧಾರವಾಡ 08, ಗದಗ 02, ಹಾವೇರಿ 04, ಕಲಬುರ್ಗಿ 05, ಕೊಡಗು 01, ಕೋಲಾರ 03, ಕೊಪ್ಪಳ 08, ಮಂಡ್ಯ 06, ಮೈಸೂರು 26, ರಾಯಚೂರು 02 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ ಎಂದಿದೆ.
ರಾಮನಗರ 06, ಶಿವಮೊಗ್ಗ, ವಿಜಯನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಲಾ ನಾಲ್ವರು, ವಿಜಯನಗರ 01 ಸೇರಿದಂತೆ 297 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದಿದೆ.
ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 320 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 1,136ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಕೋವಿಡ್ ಸೋಂಕಿನಿಂದ ಸಾವು ವರದಿಯಾಗಿಲ್ಲ ಅಂತ ತಿಳಿಸಿದೆ.
‘ಮುಂಗಾರಿ’ನಲ್ಲಿ ಬಂದ ಬರಕ್ಕೆ, ಸಂಕ್ರಾಂತಿಯಲ್ಲಿ ‘ಬಿಡಿಗಾಸು’ ಪರಿಹಾರ – ಆರ್.ಅಶೋಕ್ ಕಿಡಿ
BREAKING: ಕರವೇ ರಾಜ್ಯಾಧ್ಯಕ್ಷ ‘ಟಿ.ಎ ನಾರಾಯಣಗೌಡ’ಗೆ ಜಾಮೀನು ಮಂಜೂರು