ಬೆಂಗಳೂರು: ನಗರದಲ್ಲಿ ಉತ್ತಮ ಸಾರಿಗೆ ಒದಗಿಸುತ್ತಿರುವಂತ ಬಿಎಂಟಿಸಿ ಬಸ್ಸಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದಂತ ಪ್ರಯಾಣಿಕರ ವಿರುದ್ಧ ಸಮರವನ್ನೇ ಸಾರಿ ಬರೋಬ್ಬರಿ 2,778 ಕೇಸ್ ಪತ್ತೆ ಹಚ್ಚಿ 5.58 ಲಕ್ಷ ದಂಡವನ್ನು ವಸೂಲಿ ಮಾಡಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತಿಳಿಸಿದ್ದು, ತನ್ನ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೇಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಮತ್ತು ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಗರದಾದ್ಯಂತ ಸಂಚರಿಸುವ ವಾಹನಗಳನ್ನು ನಮ್ಮ ಸಂಸ್ಥೆಯ ತನಿಖಾ ತಂಡಗಳು ಜುಲೈ-2024 ರ ಮಾಹೆಯಲ್ಲಿ ಒಟ್ಟು 18,489 ಟ್ರಿಪ್‌ಗಳನ್ನು ತಪಾಸಿಸಿ 2778 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು ರೂ. 5,58,910/- ದಂಡ ವಸೂಲಿ ಮಾಡಿ ಸಂಸ್ಥೆಯ ನಿರ್ವಾಹಕರ ವಿರುದ್ಧ 1699 ಪ್ರಕರಣಗಳನ್ನು ದಾಖಲಿಸಿರುತ್ತಾರೆ ಎಂದಿದೆ.
ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 550 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 55,000/-ನ್ನು ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿರುತ್ತದೆ.
ಒಟ್ಟಾರೆಯಾಗಿ ಜುಲೈ-2024 ರ ಮಾಹೆಯಲ್ಲಿ 3328 ಪ್ರಯಾಣಿಕರಿಂದ ಒಟ್ಟು ರೂ 6,13,910/- ದಂಡವನ್ನು ವಸೂಲಿ ಮಾಡಲಾಗಿದೆ.
ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್ / ದಿನದ ಪಾಸು / ವಾರದ ಪಾಸು/ ಮಾಸಿಕ ಪಾಸು /ಗಳನ್ನು ಹೊಂದಿ ಪ್ರಯಾಣಿಸುವುದು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಕೋರಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ: ಕೇಂದ್ರ ಕಛೇರಿ: ಕೇಂದ್ರ ತನಿಖಾದಳ ಜುಲೈ -2024 ಮಾಹೆಯ ತನಿಖಾ ಕಾರ್ಯ ಸಾಧನೆ ವಿವರಣಾ ಪಟ್ಟಿ
ಕ್ರಮ ಸಂಖ್ಯೆ | ವಿವರ | ಜುಲೈ-2024
|
1 | ತನಿಖೆ ಮಾಡಿದ ಒಟ್ಟು ಬಸ್‌ಗಳು | 18,489 |
2 | ಪತ್ತೆಯಾದ ಪ್ರಕರಣಗಳು | |
ಅ)ಸಾಮಾನ್ಯ ಪ್ರಕರಣಗಳು | 1548 | |
ಆ)ಕೆಂಪು ಚುಕ್ಕೆ ಪ್ರಕರಣಗಳು | 96 | |
ಇ) ಗಂಭೀರ ಕೆಂಪುಚುಕ್ಕೆ ಪ್ರಕರಣಗಳು | 34 | |
ಈ)ವಿಶೇಷ ಪ್ರಕರಣಗಳು | 16 | |
ಉ)ಖಾಸಗಿ ಬಸ್‌ಗಳ ಪ್ರಕರಣ | 05 | |
ಒಟ್ಟು | 1699 | |
3 | ಟಿಕೇಟ್ ರಹಿತ ಪ್ರಯಾಣಿಕರಿಂದ ವಸೂಲಾದ ದಂಡದ ಹಣ (ರೂ) | 5,58,910.00 |
4 | ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ ಪುರುಷ ಪ್ರಯಾಣಿಕರಿಂದ ವಸೂಲಾದ ದಂಡದ ಹಣ (ರೂ) | 55,000.00 |
5 | ಒಟ್ಟು ವಸೂಲಾದ ದಂಡದ ಹಣ (ರೂ) | 6,13,910.00 |
6 | ದಂಡ ವಿಧಿಸಲಾದ ಟಿಕೇಟ್ ರಹಿತ ಪ್ರಯಾಣಿಕರ ಸಂಖ್ಯೆ | 2778 |
7 | ದಂಡ ವಿಧಿಸಲಾದ ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ ಪುರುಷ ಪ್ರಯಾಣಿಕರ ಸಂಖ್ಯೆ | 550 |
8 | ದಂಡ ವಿಧಿಸಲಾದ ಒಟ್ಟು ಪ್ರಯಾಣಿಕರ ಸಂಖ್ಯೆ | 3328 |
BIG NEWS : ಏನ್ರಿ ಮೀಡಿಯಾ?…ಎಂದಿದ್ದ ಕೊಲೆ ಆರೋಪಿ ನಟ ದರ್ಶನ್ ಗೆ ಜೈಲಿನಲ್ಲಿ ಟಿವಿ ಬೇಕೆ ಬೇಕಂತೆ!
ರೈಲ್ವೆ ಪ್ರಯಾಣಿಕರ ಗಮನಕ್ಕೆ: ಭುವನೇಶ್ವರ-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ