ಲಂಡನ್: ರೆಸ್ಟೋರೆಂಟ್ನಿಂದ ಖರೀದಿಸಿದ ಬಟರ್ ಚಿಕನ್ ಕರಿಯನ್ನು ಸೇವಿಸಿದ ಇಂಗ್ಲೆಂಡ್ನ 27 ವರ್ಷದ ಯುವಕ ದುರಂತವಾಗಿ ಸಾವನ್ನಪ್ಪಿದ್ದಾನೆ.
ಅರುಣಾಚಲ ಪ್ರದೇಶ ಪ್ರವಾಸದ ವೇಳೆ 10,000 ಕೋಟಿ ರೂ.ಗಳ ಸೆಲಾ ಸುರಂಗ, ಉನ್ನತಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
ಸೇವನೆಯ ನಂತರ, ವ್ಯಕ್ತಿಯು ಹೃದಯ ಸ್ತಂಭನದಿಂದ ಸತ್ತಿದ್ದಾನೆ. ಇಂಗ್ಲೆಂಡ್ನ ಗ್ರೇಟರ್ ಮ್ಯಾಂಚೆಸ್ಟರ್ನ ಬುರಿ ಮೂಲದ ಜೋಸೆಫ್ ಹಿಗ್ಗಿನ್ಸನ್ ಅವರು ವಿಶೇಷ ಅನಾಫಿಲ್ಯಾಕ್ಸಿಸ್ ಅನ್ನೋ ಅಲರ್ಜಿ ಸಮಸ್ಯೆಗೆ ತುತ್ತಾಗಿದ್ದರು. ಹೀಗಾಗಿ ಈತನಿಗೆ ಕೆಲ ಆಹಾರಗಳ ಸೇವೆನೆ ನಿಷಿದ್ಧವಾಗಿತ್ತು.ಆದರೆ ಇದಕ್ಕೂ ಮೊದಲು ಹಿಗ್ಗಿನ್ಸನ್ ಇತರ ನಟ್ಸ್ ಆಹಾರಗಳನ್ನು ಸೇವನೆ ಮಾಡಿದ್ದರು. ಇದರಿಂದ ಮಾರಣಾಂತಿಕ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಹೊಟೆಲ್‌ನಿಂದ ಪಡೆದ ಬಟರ್ ಚಿಕನ್ ಪಾರ್ಸೆಲ್‌ನಲ್ಲಿ ಪದಾರ್ಥದಲ್ಲಿ ಬಳಸಿರುವ ವಸ್ತುಗಳ ಕುರಿತು ಮಾಹಿತಿ ನೀಡಲಾಗಿತ್ತು. ಇದರಲ್ಲಿ ಬಾದಾಮಿ ಸೇರಿದಂತೆ ಬೀಜಗಳ ಬಳಕೆ, ಅಲರ್ಜಿ ಪ್ರಮಾಣಗಳನ್ನು ಮುದ್ರಿಸಲಾಗಿತ್ತು.ಆದರೂ ಆತ ಅದನ್ನು ಸೇವಿಸಿ ದ್ದಾನೆ.
ಈ ಹಿಂದೆ ಇದೇ ರೀತಿ ಬಟರ್ ಚಿಕನ್ ಸೇರಿದಂತೆ ಇತರ ಖಾದ್ಯಗಳನ್ನು ಸೇವಿಸಿದ್ದರು. ಈ ವೇಳೆ ಸಮಸ್ಯೆ ಎದುರಾಗಿರಲಿಲ್ಲ. ಹೀಗಾಗಿ ಮತ್ತೆ ಬಟರ್ ಚಿಕನ್ ಸೇವಿಸಿದ್ದಾನೆ.
ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಹಿಗ್ಗಿನ್ಸನ್, ಬಟರ್ ಚಿಕನ್ ಕರಿಯನ್ನು ಬಾದಾಮಿ ಒಳಗೊಂಡಿದೆ ಎಂದು ಸ್ಪಷ್ಟವಾಗಿ ಲೇಬಲ್ ಮಾಡಿದ್ದರೂ ಮತ್ತು ಸರಿಯಾದ ಅಲರ್ಜಿ ಮಾಹಿತಿಯನ್ನು ಒದಗಿಸಿದರೂ ಅದನ್ನು ಸೇವಿಸಿದರು. ಹಾಗಾಗಿ ಹೃದಯಾಘಾತದಿಂದ ನಿಧನರಾದರು