ಶಿವಮೊಗ್ಗ: ಜಿಲ್ಲೆ ಸಾಗರ ತಾಲ್ಲೂಕು ಸಾಗರ ಕರಾಟೆ ಇನ್ಸ್ ಸ್ಟಿಟ್ಯೂಟ್ (ರಿ) ಇದರ 25 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಮತ್ತು ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಪದಕ ವಿಜೇತರಾದ ಕರಾಟೆ ಪಟುಗಳಿಗೆ ಸನ್ಮಾನಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಅಂಚೆ ಕಛೇರಿ ಮುಂಭಾಗದಲ್ಲಿರುವ ಮಹಿಳಾ ಸಮಾಜ ಸಭಾಭವನದಲ್ಲಿ ಸಾಗರ ಕರಾಟೆ ಇನ್ಸ್ ಸ್ಟಿಟ್ಯೂಟ್(ರಿ)ಯ 25ನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಕರಾಟೆ ಪಂದ್ಯದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಿ, ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಗರ ಕರಾಟೆ ಇನ್ಸ್ ಸ್ಟಿಟ್ಯೂಟ್ ನ ತರಬೇತುದಾರರ ಶಿಯಾನ್ ಪಂಚಪ್ಪ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ತಾಲ್ಲೂಕು ಅಧ್ಯಕ್ಷ ಜಿ.ನಾಗೇಶ್, ಸಾಮಾಜಿಕ ಹೋರಾಟಗಾರ ತೀ.ನ ಶ್ರೀನಿವಾಸ್, ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ ಉಪಸ್ಥಿತರಿದ್ದರು.
ಸಾಗರ ಕರಾಟೆ ಇನ್ಸ್ ಸ್ಟಿಟ್ಯೂಟ್ ನ 25ನೇ ವಾರ್ಷಿಕೋತ್ಸವ ಕಾರ್ಯಮವನ್ನು ಅರ್ಚನಾ ನಿರೂಪಿಸಿದರೇ, ರತ್ನಾವತಿ ಸ್ವಾಗತಿಸಿದರು. ರೂಪಿಣಿ ವಂದಿಸಿದರು.
ಪರಿಷ್ಕೃತ ಜಿಎಸ್ಟಿ ದರಗಳಿಂದ ಯಾವ ವಸ್ತುಗಳು ಅಗ್ಗವಾಗಬಹುದು? ಇಲ್ಲಿದೆ ಡೀಟೆಲ್ಸ್ | GST bonanza
ಧರ್ಮಸ್ಥಳದ ಕುರಿತ ನಿರಂತರ ಅಪಪ್ರಚಾರಕ್ಕೆ ಬಿವೈ ವಿಜಯೇಂದ್ರ ತೀವ್ರ ಆಕ್ಷೇಪ: ಸಿಎಂ ಜನತೆ ಕ್ಷಮೆಗೆ ಒತ್ತಾಯ