ಬೆಂಗಳೂರು: ಇಂದು ಕೂಡ ಕೋವಿಡ್ ಸೋಂಕಿನ ( Covid19 Case ) ಸಂಖ್ಯೆ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 240 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ. ಅಲ್ಲದೇ ಸೋಂಕಿಗೆ ಓರ್ವ ಬಲಿಯಾಗಿದ್ದಾರೆ.
ಈ ಕುರಿತಂತೆ ಇಂದು ರಾಜ್ಯ ಆರೋಗ್ಯ ಇಲಾಖೆಯಿಂದ ( Karnataka Health Department ) ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ RTPCR ಮೂಲಕ 6223 ಹಾಗೂ RAT ಮೂಲಕ 792 ಸೇರಿದಂತೆ 7015 ಜನರನ್ನು ಕೊರೋನಾ ಸೋಂಕು ( Coronavirus ) ಪತ್ತೆ ಪರೀಕ್ಷೆಗೆ ಒಳಪಡಿಸಿರೋದಾಗಿ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಪಟ್ಟಂತ 7015 ಜನರಲ್ಲಿ ಬಾಗಲಕೋಟೆ, ಬೆಳಗಾವಿ, ಧಾರವಾಡ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ, ಬಳ್ಳಾರಿ 03, ಬೆಂಗಳೂರು ಗ್ರಾಮಾಂತರ 06, ಬೆಂಗಳೂರು ನಗರ 124, ಚಾಮರಾಜನಗರ 04, ಚಿಕ್ಕ ಬಳ್ಳಾಪುರ 05, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ತಲಾ 6, ದಕ್ಷಿಣ ಕನ್ನಡ, ದಾವಣಗೆರೆ, ಹಾಸನ ಜಿಲ್ಲೆಯಲ್ಲಿ ತಲಾ ಇಬ್ಬರು, ಮೈಸೂರು 19 ಮಂದಿಗೆ ಕೋವಿಡ್ ದೃಢಪಟ್ಟಿದೆ ಎಂದಿದೆ.
ಇದಲ್ಲದೇ ತುಮಕೂರು 21, ಶಿವಮೊಗ್ಗ 11, ಮಂಡ್ಯ 09, ಉತ್ತರ ಕನ್ನಡ 04, ವಿಜಯನಗರ 06 ಸೇರಿದಂತೆ 240 ಮಂದಿಗೆ ಕೋವಿಡ್ ದೃಢಪಟ್ಟಿದೆ. ಇಂದು 220 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 993 ಸಕ್ರೀಯ ಸೋಂಕಿತರು ಇದ್ದಾರೆ ಎಂದು ತಿಳಿಸಿದೆ.
‘ಯುವನಿಧಿ ಯೋಜನೆ’ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ‘ಶಿವಮೊಗ್ಗ ಸಜ್ಜು’
BREAKING : ರಾಮ ಮಂದಿರ ಉದ್ಘಾಟನೆ ವೇಳೆ ಉಗ್ರ ದಾಳಿಗೆ ಸ್ಕೆಚ್ : ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ