ನವದೆಹಲಿ: ಈ ಬಾರಿ ಸಂಸತ್ತಿನ ಬಜೆಟ್ ಅಧಿವೇಶನವನ್ನು 9 ದಿನಗಳ ಕಾಲ ನಿಗದಿ ಪಡಿಸಲಾಗಿತ್ತು. ಆದರೂ ಮತ್ತೊಂದು ದಿನ ವಿಸ್ತರಿಸಲಾಗಿತ್ತು. ಲೋಕಸಭೆಯಲ್ಲಿ 228, ರಾಜ್ಯಸಭೆಯಲ್ಲಿ 220 ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ ಎಂಬುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಅವರು, ಸಂಸತ್ತಿನ ಕೇಂದ್ರ ಮಧ್ಯಂತರ ಬಜೆಟ್ ಅಧಿವೇಶನವನ್ನು 9 ದಿನಗಳ ಕಾಲ ಮೊದಲು ನಿಗದಿ ಪಡಿಸಲಾಗಿತ್ತು. ಆ ಬಳಿಕ ಮತ್ತೊಂದು ದಿನ ಅಧಿವೇಶನ ವಿಸ್ತರಣೆ ಮಾಡಲಾಯಿತು ಎಂದರು.
ಬಜೆಟ್ ಅಧಿವೇಶದನದ ವೇಳೆ 12 ಬಿಲ್ ಮಂಡಿಸಿ ಅಂಗೀಕರಿಸಲಾಗಿದೆ. ಸಂಸದೀಯ ಕಲಾಪಗಳ ಉತ್ಪದಕತೆ 148 ಪರ್ಸೆಂಟ್ ನಷ್ಟು ಇದೆ ಎಂದರು.
17ನೇ ಲೋಕಸಭಾಯಲ್ಲಿ 274 ಕಲಾಪಗಳು ನಡೆದಿವೆ. ಲೋಕಸಭೆಯಲ್ಲಿ 228 ವಿಧೇಯಕ ಮಂಡಿಸಿ ಅಂಗೀಕರಿಸಲಾಗಿದೆ. ರಾಜ್ಯಸಭೆಯಲ್ಲಿ 271 ಕಲಾಪ ನಡೆಸಲಾಗಿದೆ. ರಾಜ್ಯಸಭೆಯಲ್ಲಿ ಒಟ್ಟು 220 ವಿಧೇಯಕ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.
BREAKING: ‘ಸಾರಿಗೆ ಸಚಿವ ರಾಮಲಿಂಗಾರೆಡ್ಡಿ’ಗೆ ಜಾಮೀನು ರಹಿತ ‘ವಾರೆಂಟ್ ಜಾರಿ’
ರಾಜ್ಯ ‘ಗುತ್ತಿಗೆ, ಹೊರಗುತ್ತಿಗೆ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ: ಸಮಾನ ಕೆಲಸಕ್ಕೆ, ‘ಸಮಾನ ವೇತನ’ ಜಾರಿ