ತೆಲಂಗಾಣ: ಛತ್ತೀಸ್ಗಢ-ತೆಲಂಗಾಣ ಗಡಿಯ ಬಿಜಾಪುರದಲ್ಲಿ ಬುಧವಾರ ನಡೆದ ಎನ್ಕೌಂಟರ್ನಲ್ಲಿ 22 ನಕ್ಸಲರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ.
ಛತ್ತೀಸ್ಗಢ-ತೆಲಂಗಾಣ ಗಡಿಯಲ್ಲಿರುವ ಬಿಜಾಪುರ ಜಿಲ್ಲೆಯ ಕರೇಗುಟ್ಟ ಹಿಲ್ಸ್ ಬಳಿ ಮಿಷನ್ ಸಂಕಲ್ಪ್ ಅಡಿಯಲ್ಲಿ ಎನ್ಕೌಂಟರ್ ನಡೆಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಛತ್ತೀಸ್ ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮಾತನಾಡಿ, ಛತ್ತೀಸ್ ಗಢ-ತೆಲಂಗಾಣ ಗಡಿಯ ಕರೇಗುಟ್ಟ ಹಿಲ್ಸ್ ಬಳಿ ಹಲವು ದಿನಗಳಿಂದ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ 22ಕ್ಕೂ ಹೆಚ್ಚು ನಕ್ಸಲರ ಶವಗಳು ಪತ್ತೆಯಾಗಿವೆ. ಕಾರ್ಯಾಚರಣೆ ನಡೆಯುತ್ತಿದೆ.
#WATCH | On Mission Sankalp, Chhattisgarh CM Vishnu Deo Sai says, "For many days, anti-naxal operation has been going on near Karegutta Hills on Chhattisgarh-Telangana border. Till now, more than 22 bodies of naxals have been found there. Operation is underway." pic.twitter.com/cEqrqP4ewc
— ANI (@ANI) May 7, 2025