ಬೆಂಗಳೂರು: ನಗರದಲ್ಲಿ ಇಂದು ಲೋಕಸಭಾ ಚುನಾವಣೆ ಅಕ್ರಮ ಸಂಬಂಧ ಅಕ್ರಮವಾಗಿ ಸಾಗಿಸುತ್ತಿದ್ದಂತ 216.505 ಲೀಟರ್ ಮದ್ಯವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಈ ಕುರಿತಂತೆ ಬಿಬಿಎಂಪಿಯ ಸ್ಪೆಷಲ್ ಕಮೀಷನರ್ ಮಾಹಿತಿ ನೀಡಿದ್ದು, ಇಂದು 1,51,621 ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ. 216.505 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
ಇದಷ್ಟೇ ಅಲ್ಲದೇ ಬರೋಬ್ಬರಿ 17 ಕೆಜಿ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. ಅದರ ಮೌಲ್ಯ 1,87,800 ಆಗಿರುತ್ತದೆ. ಒಟ್ಟಾರೆ ಇಂದು ರೂ.3,69,421 ಮೌಲ್ಯದ ಮದ್ಯ, ಮಾದಕ ವಸ್ತು ಜಪ್ತಿ ಮಾಡಲಾಗಿದೆ. 29 ಎಫ್ಐಆರ್ ದಾಖಲಿಸಲಾಗಿದೆ. 30,000 ಮೌಲ್ಯ ಒಂದು ವಾಹನ ಕೂಡ ಸೀಜ್ ಮಾಡಿರೋದಾಗಿ ತಿಳಿಸಿದ್ದಾರೆ.
ಅಂದಹಾಗೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ 67,00,500 ಹಣ, 30,908.595 ಲೀಟರ್ ನಷ್ಟು ರೂ.1,54,65,719 ಮೌಲ್ಯದ ಮದ್ಯವನ್ನು ಸೀಜ್ ಮಾಡಲಾಗಿದೆ. ಇದಲ್ಲದೇ 21.99 ಕೆಜಿ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದ್ದು, ಅದರ ಮೌಲ್ಯ ರೂ.3,96,300 ಆಗಿದೆ. ಗಿಫ್ಟ್, ಆಮಿಷಗಳನ್ನು ಒಟ್ಟಿದ ಸಂಬಂಧ 6,05,600 ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ಈವರೆಗೆ 22 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಅದರ ಮೌಲ್ಯ 14,65,010 ಆಗಿದೆ. ಒಟ್ಟಾರೆ 2,83,83,179 ಹಣ, ವಸ್ತು, ಮಾದಕ ದ್ರವ್ಯ, ವಾಹನ ವಶಕ್ಕೆ ಪಡೆಯಲಾಗಿದೆ. 240 ಎಫ್ಐಆರ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ದಾಖಲಿಸಲಾಗಿದೆ ಎಂದಿದ್ದಾರೆ.
BREAKING: ‘ಮೋದಿ’ ಬಗ್ಗೆ ಅವಹೇಳನಕಾರಿ ಹೇಳಿಕೆ: ‘ಶಿವರಾಜ ತಂಡರಗಿ’ ವಿರುದ್ಧ ಚುನಾವಣಾ ಆಯೋಗಕ್ಕೆ ‘ಬಿಜೆಪಿ ದೂರು’
ಲಂಡನ್ ನಲ್ಲಿ ಕಸದ ಲಾರಿಗೆ ಸೈಕಲ್ ಡಿಕ್ಕಿ : ಭಾರತೀಯ ಮೂಲದ ‘PHD’ ವಿದ್ಯಾರ್ಥಿನಿ ಸಾವು