Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಪೋಷಕರೇ ಎಚ್ಚರ ; ಜೇಡ ಕಚ್ಚಿ ಬಾಲಕಿ ಸಾವು

07/08/2025 10:05 PM

BREAKING ; ಟ್ರಂಪ್ ಸುಂಕ ಹೆಚ್ಚಳದ ನಡುವೆ ಮಾಸ್ಕೋದಲ್ಲಿ ‘ಪುಟಿನ್’ ಭೇಟಿಯಾದ NSA ‘ಅಜಿತ್ ದೋವಲ್’

07/08/2025 9:48 PM

BREAKING ; ಟೀಂ ಇಂಡಿಯಾಗೆ ಬಿಗ್ ಶಾಕ್ ; 2025ರ ಏಷ್ಯಾ ಕಪ್ ಸೇರಿ 2 ಪ್ರಮುಖ ಸರಣಿಗಳಿಂದ ‘ರಿಷಭ್ ಪಂತ್’ ಔಟ್ : ವರದಿ

07/08/2025 9:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 2024 ಪ್ರಯಾಣಿಕ ಸ್ನೇಹಿ ವರ್ಷ: ‘ಉತ್ತಮ ಸೇವೆ’ ನೀಡೋದಾಗಿ ‘KSRTC’ ಘೋಷಣೆ
KARNATAKA

2024 ಪ್ರಯಾಣಿಕ ಸ್ನೇಹಿ ವರ್ಷ: ‘ಉತ್ತಮ ಸೇವೆ’ ನೀಡೋದಾಗಿ ‘KSRTC’ ಘೋಷಣೆ

By kannadanewsnow0902/01/2024 3:46 PM

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸೋ ನಿರ್ಧಾರವನ್ನು 2024ರಲ್ಲಿ ಮಾಡೋದಾಗಿ ಘೋಷಿಸಿದೆ. ಅಲ್ಲದೇ 2024 ಅನ್ನು ಪ್ರಯಾಮಿಕ ಸ್ನೇಹಿ ವರ್ಷವಾಗಿ ಘೋಷಣೆ ಮಾಡಿದೆ.

ಈ ಬಗ್ಗೆ ಕೆ ಎಸ್ ಆರ್ ಟಿಸಿಯಿಂದ ಮಾಹಿತಿ ನೀಡಲಾಗಿದ್ದು, ಕೆ ಎಸ್ ಆರ್ ಟಿ ಸಿಯು ತನ್ನ ಗತವೈಭವದ ಪಯಣಕ್ಕೆ ಮರುಕಳಿಸಿದ್ದು, ಈ ಪ್ರಯಾಣದ ಅವಿಭಾಜ್ಯ ಅಂಗವಾದ ನಿಗಮದ ಸಮಸ್ತ ಅಧಿಕಾರಿ/ಸಿಬ್ಬಂದಿಗಳು ಹಾಗೂ ಸಾರ್ವಜನಿಕ ಪುಯಾಣಿಕರಿಗೆ ಹೊಸ ವರುಷ 2024ರ ಹಾರ್ದಿಕ ಶುಭಾಶಯಗಳು. ಕೆ ಎಸ್ ಆರ್ ಟಿ ಸಿ ಯು 2024 ನೇ ವರ್ಷವನ್ನು “ಪಯಾಣಿಕ ಸ್ನೇಹಿ ವರ್ಷ” ವೆಂದು ಘೋಷಣೆ ಮಾಡಿದೆ. ನಿಗಮವು 2023 ನೇ ವರ್ಷವನ್ನು ಕಾರ್ಮಿಕ ಕಲ್ಯಾಣ ವರ್ಷ” ವೆಂದು ಘೋಷಿಸಿ, ಈ ಕೆಳಕಂಡ ಕಾರ್ಮಿಕಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು ಎಂದಿದೆ.

• ರೂ.1 ಕೋಟಿಗಳ On Road/ Off Road ಅಪಘಾತ ವಿಮಾ ಯೋಜನೆ. ಈ ಯೋಜನೆಯಡಿಯಲ್ಲಿ ಈಗಾಗಲೇ 12 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.1 ಕೋಟಿ ವಿಮಾ ಹಣವನ್ನು ನೀಡಲಾಗಿದೆ.

• ನಿಗಮದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೊತ್ತವನ್ನು 3 ರಿಂದ 5 ಪಟ್ಟು ಹೆಚ್ಚಳ ಮಾಡಿ, ಹೊಸ ಕೋರ್ಸುಗಳನ್ನು ಸೇರ್ಪಡೆಗೊಳಿಸಿ, ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದು “ವಿದ್ಯಾ ಚೇತನ ಯೋಜನೆ” ಹೆಸರಿನಲ್ಲಿ 3345 ಮಕ್ಕಳಿಗೆ ರೂ.1.67 ಕೋಟಿ ವಿದ್ಯಾರ್ಥಿ ವೇತನವನ್ನು ಪಾವತಿಸಲಾಗಿದೆ.
• ತನ್ನ ಸಿಬ್ಬಂದಿಗಳ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಸದುದ್ದೇಶದಿಂದ, ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, 10 ಕ್ಕಿಂತ ಹೆಚ್ಚಿನ ಹೃದಯ ಸಂಬಂಧಿ ಪರೀಕ್ಷೆಗಾಗಿ ಪ್ರತಿ ವರ್ಷ ರೂ.2.55 ಕೋಟಿಗಳನ್ನು ಪಾವತಿಸುತ್ತಿದೆ. ಇದರಿಂದ ಸುಮಾರು 21000 ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ.

• ಕಾರ್ಮಿಕರ ಕುಟುಂಬ ಕಲ್ಯಾಣ ಯೋಜನೆಯಡಿ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ.
• ಈಗಾಗಲೇ ನೌಕರರ ಮೇಲಿನ 10364 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತದ ದಂಡ ವಿಧಿಸಿ ಮನ್ನಾ ಹಾಗೂ 10 ತಿಂಗಳುಗಿಂತ ಕಡಿಮೆ ಗೈರು ಹಾಜರಿ ಪುಕರಣಗಳಲ್ಲಿ 425ಕ್ಕೂ ಹೆಚ್ಚು ಚಾಲಕರಿಗೆ ಕರ್ತವ್ಯಕ್ಕೆ ಮರಳಲು ಅವಕಾಶ ನೀಡಲಾಗಿದೆ.
• ಕೇಂದ್ರ ಕಛೇರಿಯ ಮಟ್ಟದಲ್ಲಿ ವ್ಯವಸ್ಥಾಪಕ ನಿರ್ದೇಶಕರು/ ನಿರ್ದೇಶಕರು (ಸಿಜಾ)ರವರು ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿ ಪರಿಹಾರವನ್ನು ಒದಗಿಸುತ್ತಿದ್ದಾರೆ.

• ವಿಭಾಗ/ಘಟಕ ಮಟ್ಟದಲ್ಲಿ ಕಾಲಕಾಲಕ್ಕೆ ಸಿಬ್ಬಂದಿಗಳ ಕುಂದು ಕೊರತೆ ಸಭೆಯನ್ನು ಆಯೋಜಿಸಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತಿದೆ.
ನಿಗಮಗಳಿಗೆ ಸ್ವಾಯತ್ತತೆ ನೀಡಲಾಗಿದ್ದು, (Autonomous) ಅಧಿಕಾರಿಗಳು/ಸಿಬ್ಬಂದಿಗಳನ್ನು ಆಯಾಯ ನಿಗಮಗಳಿಗೆ ವರ್ಗಾಯಿಸಿ ಅನುಕೂಲ ಕಲ್ಪಿಸಲಾಗಿದೆ.
• ಅಂತರ ವಿಭಾಗ/ ಘಟಕಗಳಿಗೆ 900 ಕ್ಕೂ ಹೆಚ್ಚು ನೌಕರರಿಗೆ ವರ್ಗಾವಣೆ ನೀಡಲಾಗಿದೆ.

• ಚಾಲಕರಲ್ಲಿ ಸುರಕ್ಷತಾ ಚಾಲನೆಯನ್ನು ಹವ್ಯಾಸವಾಗಿಸುವ ನಿಟ್ಟಿನಲ್ಲಿ, ಅಪಘಾತರಹಿತ ಚಾಲನೆಯ ಕುರಿತು ಆಯೋಜನೆ ಹಾಗೂ 65 ಹೊಸ ಬೊಲೆರೋ ಕಾರ್ಯಾಗಾರ/ಉಪನ್ಯಾಸಗಳ ಜೀಪುಗಳನ್ನು ವಿಭಾಗಗಳಿಗೆ ಹಾಗೂ ನೀಡಿದ್ದು, ಅಪಘಾತ ಸ್ಥಳಗಳಿಗೆ ತ್ವರಿತವಾಗಿ ತೆರಳಲು ಮುಂಜಾಗ್ರತಾ ಕ್ರಮವಹಿಸಲಾಗಿದೆ.
• ನಿಗಮದ ಅರ್ಹ ನೌಕರರಿಗೆ Higher Pension ಸೌಲಭ್ಯವನ್ನು ಒದಗಿಸುತ್ತಿದ್ದು, ಅಂದಾಜು ರೂ.1650 ಕೋಟಿಗಳಷ್ಟು ಪಾವತಿಸಲಾಗುವುದು.

2024ನೇ ಸಾಲಿನ ಪ್ರಯಾಣಿಕ ಸ್ನೇಹಿ ವರ್ಷದಲ್ಲಿ ನಿಗಮವು ಕೈಗೊಳ್ಳುವ ನೂತನ ಕಾರ್ಯಕ್ರಮಗಳು ಕಿರುನೋಟ ಇಲ್ಲಿದೆ.

• ಈಗಾಗಲೇ ಪ್ರಯಾಣಿಕ ಸ್ನೇಹಿ ವರ್ಷದ ಘೋಷಣೆಯಂತೆ, ದಿನಾಂಕ: 01/01/2024 ರಿಂದ ಜಾರಿಗೆ ಬರುವಂತೆ, ಅಪಘಾತ ಪರಿಹಾರ ವಿಮಾ ಯೋಜನೆಯಡಿ ಮೃತ ಪ್ರಯಾಣಿಕರ ಅವಲಂಬಿತರಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ.
• ಪ್ರಸಕ್ತ ವರ್ಷದಲ್ಲಿ 2000 ಹೊಸ ವಾಹನಗಳ ಸೇರ್ಪಡೆ.
• ಅಂಬಾರಿ ಉತ್ಸವ- 20, ಐರಾವತ ಕ್ಲಬ್ ಕ್ಲಾಸ್- 20, ಪಲ್ಲಕ್ಕಿ, 100, ಪಾಯಿಂಟ್- ಟು -ಪಾಯಿಂಟ್ ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳು – 1000, ಎಲೆಕ್ನಿಕ್ ಬಸ್ಸುಗಳು-500
• ಪುಸ್ತುತ ಪರಿಚಯಿಸಲಾಗಿರುವ 20 “ನಮ್ಮ ಕಾರ್ಗೋ ಟ್ರಕ್ಕುಗಳನ್ನು ವರ್ಷಾಂತ್ಯಕ್ಕೆ 500 ಕ್ಕೆ ಹೆಚ್ಚಿಸಲಾಗುವುದು.
• 1000 ವಾಹನಗಳ ಪುನಶ್ವೇತನ ಯೋಜನೆಯ ಗುರಿ ಹೊಂದಲಾಗಿದೆ.
• ಬಸ್ ನಿಲ್ದಾಣಗಳ ಶುಚಿತ್ವಕ್ಕೆ ಆದ್ಯತೆ. ಉತ್ತಮ ಕುಡಿಯುವ ನೀರು, ಆಸನಗಳು ಹಾಗೂ ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವುದು.
• ಮಾಹಿತಿ ತಂತ್ರಜ್ಞಾನವನ್ನು ಆಧುನೀಕರಣಗೊಳಿಸಿ, ಪ್ರಯಾಣಿಕರ GFOOT VTMS (Vehicle Tracking & Monitoring System), Mobile App, (UPI, ATM, Debit/ Credit Cards, NAMC) ಕಾರ್ಡ್ ಜಾರಿ, ನಗದು ರಹಿತ ಸೇವೆಗೆ ಆದ್ಯತೆ.
• ಬಸ್ಸುಗಳ ಸ್ವಚ್ಛತೆ ಹಾಗೂ ಯಾಂತ್ರಿಕ ನಿರ್ವಹಣೆಗೆ ಒತ್ತು

• ಚಾಲನಾ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವ ಸಂಬಂಧ ನುರಿತ ತರಬೇತುದಾರರಿಂದ Soft Skill Training ಹಾಗೂ ಅಪಘಾತ |ಸಂಚಾರ ನಿಯಮ ಪಾಲನೆ ಸಂಬಂಧ ನಿರಂತರ ಕಾರ್ಯಾಗಾರ ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳು/ಉಪಕ್ರಮಗಳು 2023 ರ ಸಾಲಿನಲ್ಲಿ 50 ಕ್ಕೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದು, ಈ ಪ್ರಶಸ್ತಿಗಳನ್ನು ನಿಗಮದ ಸಿಬ್ಬಂದಿಗಳು ಹಾಗೂ ಪ್ರಯಾಣಿಕರಿಗೆ ಸಮರ್ಪಿಸಲಾಗಿದೆ.

ಸಾರಿಗೆ ಮತ್ತು ಮುಜರಾಯಿ ಸಚಿವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಹಲವಾರು ಯೋಜನೆಗಳನ್ನು ರೂಪಿಸಿ, ಯಶಸ್ವಿಯಾಗಿ ಅನುಷ್ಟಾನಗೊಳಿಸುತ್ತಿದ್ದು, ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಸಮಸ್ತ ಅಧಿಕಾರಿ ಹಾಗೂ ಸಿಬ್ಬಂದಿಗಳ ಅವಿರತ ಪರಿಶ್ರಮ ಮತ್ತು ಕರ್ತವ್ಯ ನಿಷ್ಠೆ ಶ್ಲಾಘನೀಯ.

ತಮ್ಮಲ್ಲರ ಸಹಕಾರದಿಂದ ನಿಗಮವು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯನ್ನು ಹೊಂದಿ, ಸಾರ್ವಜನಿಕರಿಗೆ ಉತ್ತಮ ಸಮಗ್ರ ಸಾರಿಗೆ ಸೌಲಭ್ಯ ನೀಡುವಂತಾಗಲೆಂದು ಆಶಿಸುತ್ತೇನೆ ಅಂತ ಕೆ ಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಾದಂತ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.

Bitcoin: ಏಪ್ರಿಲ್.2022ರ ನಂತರ ಮೊದಲ ಬಾರಿಗೆ ‘45,000 ಡಾಲರ್’ ಗಡಿದಾಟಿದ ‘ಬಿಟ್ಕಾಯಿನ್’

ರೈಲು ಅಪಘಾತಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮ: ಕೇಂದ್ರದಿಂದ ವಿವರಗಳನ್ನು ಕೋರಿದ ಸುಪ್ರೀಂ ಕೋರ್ಟ್

Share. Facebook Twitter LinkedIn WhatsApp Email

Related Posts

BREAKING: ಎಂಬಿಎ/ಎಂಸಿಎ ಕೋರ್ಸ್ ಪ್ರವೇಶಕ್ಕೆ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ KEA

07/08/2025 9:21 PM2 Mins Read

ವರ ಮಹಾಲಕ್ಷ್ಮಿ ಹಬ್ಬದ ದಿನ ಎಚ್ಚರ ವಹಿಸಿ: ಮದ್ದೂರು ಪೋಲೀಸರ ಮನವಿ

07/08/2025 8:19 PM1 Min Read

‘ಮದ್ದೂರಿನ ಜನತೆ’ಗೆ ವರ ಮಹಾಲಕ್ಷ್ಮಿ ಹಬ್ಬದ ಗಿಫ್ಟ್ ಕೊಟ್ಟ ‘ರಾಜ್ಯ ಸರ್ಕಾರ’

07/08/2025 8:16 PM2 Mins Read
Recent News

SHOCKING : ಪೋಷಕರೇ ಎಚ್ಚರ ; ಜೇಡ ಕಚ್ಚಿ ಬಾಲಕಿ ಸಾವು

07/08/2025 10:05 PM

BREAKING ; ಟ್ರಂಪ್ ಸುಂಕ ಹೆಚ್ಚಳದ ನಡುವೆ ಮಾಸ್ಕೋದಲ್ಲಿ ‘ಪುಟಿನ್’ ಭೇಟಿಯಾದ NSA ‘ಅಜಿತ್ ದೋವಲ್’

07/08/2025 9:48 PM

BREAKING ; ಟೀಂ ಇಂಡಿಯಾಗೆ ಬಿಗ್ ಶಾಕ್ ; 2025ರ ಏಷ್ಯಾ ಕಪ್ ಸೇರಿ 2 ಪ್ರಮುಖ ಸರಣಿಗಳಿಂದ ‘ರಿಷಭ್ ಪಂತ್’ ಔಟ್ : ವರದಿ

07/08/2025 9:35 PM

BREAKING: ಎಂಬಿಎ/ಎಂಸಿಎ ಕೋರ್ಸ್ ಪ್ರವೇಶಕ್ಕೆ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ KEA

07/08/2025 9:21 PM
State News
KARNATAKA

BREAKING: ಎಂಬಿಎ/ಎಂಸಿಎ ಕೋರ್ಸ್ ಪ್ರವೇಶಕ್ಕೆ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ KEA

By kannadanewsnow0907/08/2025 9:21 PM KARNATAKA 2 Mins Read

ಬೆಂಗಳೂರು: ಎಂಬಿಎ/ಎಂಸಿಎ ಕೋರ್ಸ್ ಗಳ ಪ್ರವೇಶ ಸಲುವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪಿಜಿಸಿಇಟಿ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಗುರುವಾರ ಪ್ರಕಟಿಸಲಾಗಿದೆ.…

ವರ ಮಹಾಲಕ್ಷ್ಮಿ ಹಬ್ಬದ ದಿನ ಎಚ್ಚರ ವಹಿಸಿ: ಮದ್ದೂರು ಪೋಲೀಸರ ಮನವಿ

07/08/2025 8:19 PM

‘ಮದ್ದೂರಿನ ಜನತೆ’ಗೆ ವರ ಮಹಾಲಕ್ಷ್ಮಿ ಹಬ್ಬದ ಗಿಫ್ಟ್ ಕೊಟ್ಟ ‘ರಾಜ್ಯ ಸರ್ಕಾರ’

07/08/2025 8:16 PM

ಚಾಲಕ ಆತ್ಮಹತ್ಯೆ ಪ್ರಕರಣ: ಸಂಸದ ಸುಧಾಕರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

07/08/2025 7:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.