ಬೆಂಗಳೂರು: 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಸರ್ಕಾರ ಪ್ರಕಟಿಸಿದೆ. ಈ ಬಾರಿ ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಗೆ ಬಾಜನರಾಗಿದ್ದರೇ, ಅರ್ಚನಾ ಜೋಯ್ಸ್ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
ರಾಜ್ಯ ಸರ್ಕಾರವು ಇಂದು ಪ್ರಶಸ್ತಿಯನ್ನು ಪ್ರಕಟಿಸಿದ್ದು, 2021ನೇ ಸಾಲಿನ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿಗೆ ರಕ್ಷಿತ್ ಶೆಟ್ಟಿ, ನಟಿ ಪ್ರಶಸ್ತಿಗೆ ಅರ್ಚನಾ ಜೋಯ್ಸ್ ಬಾಜನರಾಗಿದ್ದಾರೆ.
ಇನ್ನೂ ದೊಡ್ಡಹಟ್ಟಿ ಬೋರೇಗೌಡ ಮೊದಲನೇ ಅತ್ಯುತ್ತಮ ಚಿತ್ರವಾಗಿದ್ದರೇ, 777 ಚಾರ್ಲಿಗೆ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿದೆ. ಬಿಸಿಲು ಕುದುರೆಗೆ 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ, ಯುವರತ್ನ ಚಿತ್ರಕ್ಕೆ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಸಂದಿದೆ. ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ ಇದಾಗಿದೆ.
ಭಾರತದ ಪ್ರಜೆಗಳಾದ ನಾವು ಚಿತ್ರಕ್ಕೆ ವಿಶೇಷ ಕಾಳಜಿಯ ಚಿತ್ರ ಪ್ರಶಸ್ತಿ ಸಂದಿದೆ.