ಬೆಂಗಳೂರು: ರಾಜ್ಯ ಸರ್ಕಾರದಿಂದ 2020-21ನೇ ಸಾಲಿನ ಡಾ.ರಾಜ್ ಕುಮಾರ್ ಹಾಗೂ ಪುಟ್ಟಣ್ಣ ಕಣಗಾಲ್, ವಿಷ್ಣುವರ್ಧನ್ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿದೆ.
2020ನೇ ಸಾಲಿನ ಡಾ.ರಾಜ್ ಕುಮಾರ್ ಪ್ರಶಸ್ತಿಯನ್ನು ಹಿರಿಯ ನಟಿ ಜಯಮಾಲಗೆ ನೀಡಿದ್ದರೇ, 2020ನೇ ಸಾಲಿನ ಪುಟ್ಟಣ ಕಣಗಾಲ್ ಪ್ರಶಸ್ತಿಯನ್ನು ಎಂ.ಎಸ್ ಸತ್ಯುಗೆ ನೀಡಲಾಗಿದೆ.
ಪ್ರಗತಿ ಅಶ್ವತ್ಥ್ ನಾರಾಯಣರಿಗೆ 2020ನೇ ಸಾಲಿನ ಡಾ.ವಿಷ್ಣವರ್ಧನ್ ಪ್ರಶಸ್ತಿಯನ್ನು ಜೀವಮಾನ ಸಾಧನೆಗಾಗಿ ನೀಡಲಾಗಿದೆ. 2021ನೇ ಸಾಲಿನ ರಾಜ್ ಕುಮಾರ್ ಪ್ರಶಸ್ತಿಯನ್ನು ಸಾರಾ ಗೋವಿಂದುಗೆ ನೀಡಲಾಗಿದೆ.
ನಿರ್ದೇಶಕ ಶಿವರುದ್ರಯ್ಯಗೆ 2021ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಹಿರಿಯ ನಟ ಎಂ.ಕೆ ಸುಂದರ್ ರಾಜ್ ಗೆ 2021ನೇ ಸಾಲಿನ ವಿಷ್ಣುವರ್ಧನ್ ಪ್ರಶಸ್ತಿಯನ್ನು ನೀಡಲಾಗಿದೆ.








