ಕರಾಚಿ: 2015ರ ಗುರುದಾಸ್ಪುರ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಅಲಿ ರಾಜಾ ಅವರನ್ನು ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಪಾಕಿಸ್ತಾನದ ಕರಾಚಿಯಲ್ಲಿ ಭಾನುವಾರ (ಜುಲೈ 7) ಅಪರಿಚಿತ ದಾಳಿಕೋರನೊಬ್ಬ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಮತ್ತು ಐಎಸ್ಐ ಅಧಿಕಾರಿ ಅಲಿ ರಾಜಾ ಅವರನ್ನು ಗುಂಡಿಕ್ಕಿ ಕೊಂದಿದ್ದಾನೆ. ಅಲಿ ರಾಜಾ 2015 ರಲ್ಲಿ ಗುರುದಾಸ್ಪುರ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಎನ್ನಲಾಗಿದೆ.