ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದಂತ ಮನೆಯಲ್ಲೇ 200 ಗ್ರಾಂ ಚಿನ್ನಾಭರಣ ಕದ್ದು ಸೈಟ್ ಖರೀದಿಸಿದಂತ ಚಾಲಾಕಿ ಕಳ್ಳಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕೊಣನಕುಂಟೆ ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಚಿನ್ನಾಭರಣ ಕದ್ದ ಕಳ್ಳಿಯನ್ನು ಬಂಧಿಸಲಾಗಿದೆ.
ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಂತ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದಂತ ದೀಪ ಎಂಬಾಕೆ, ಅದೇ ಚಿನ್ನಾಭರಣ ಮಾರಾಟ ಮಾಡಿ, ತಮಿಳಉನಾಡಿನಲ್ಲಿ ಸೈಟ್ ಖರೀದಿಸಿದ್ದಳು.
ಮನೆಯಲ್ಲಿ ಚಿನ್ನಾಭರಣ ಕಳ್ಳತನವಾದ ಬಗ್ಗೆ ಕೋಣನಕುಂಟೆ ಠಾಣೆಯ ಪೊಲೀಸರಿಗೆ ಮನೆ ಮಾಲೀಕ ಜಗದೀಶ್ ದೂರು ನೀಡಿದ್ದರು. ಈ ದೂರು ಆಧರಿಸಿ ಮನೆಯ ಕೆಲಸದಾಕೆ ದೀಪ ಬಂಧಿಸಿ, ವಿಚಾರಣೆ ನಡೆಸಿದಾಗ ಕಳ್ಳತನ, ಸೈಟ್ ಖರೀದಿ ವಿಷಯ ಬೆಳಕಿಗೆ ಬಂದಿದೆ.
ಅಂದಗಾಗೇ ಜಗದೀಶ್ ಎಂಬುವರ ಮನೆಯಲ್ಲಿ ದೀಪ ಮನೆ ಕೆಲಸ ಮಾಡುತ್ತಿದ್ದರು. ಅವರ ಮನೆಯಲ್ಲಿದ್ದ ಚಿನ್ನಾಭರಣದ ಮೇಲೆ ದೀಪ ಕಣ್ಣಿಟ್ಟಿದ್ದರು. ಒಂದೇ ಬಾರಿಗೆ ಕದ್ದರೇ ಅನುಮಾನ ಬರುತ್ತದೆ ಎಂಬುದಾಗಿ ಪ್ಲಾನ್ ಮಾಡಿ, ಕೆಲ ದಿನಗಳಿಂದ ಒಂದೊಂದೇ ಚಿನ್ನಾಭರಣ ಕದ್ದಿದ್ದರು. ಬರೋಬ್ಬರಿ 200 ಗ್ರಾಂ ಚಿನ್ನಾಭರಣ ಇದಾಗಿತ್ತು. ಇದೀಗ ಪೊಲೀಸರು ದೀಪ ಬಂಧಿಸಿ, ಆಕೆಯಿಂದ ಕದ್ದೊಯ್ದಿದ್ದಂತ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಬೀದರ್ ನಲ್ಲಿ ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ರಾಜ್ಯಪಾಲರಿಗೆ ಕೆಯುಡಬ್ಲ್ಯೂಜೆ ಆಹ್ವಾನ
ಬೀದರ್ ನಲ್ಲಿ ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ರಾಜ್ಯಪಾಲರಿಗೆ ಕೆಯುಡಬ್ಲ್ಯೂಜೆ ಆಹ್ವಾನ








