ಹುಬ್ಬಳ್ಳಿ: ಜಿಲ್ಲೆಯಲ್ಲಿ ಇಂದು ಪೊಲೀಸರ ಮುಂದೆಯೇ ಎರಡು ಕುಟುಂಬಗಳು ಮಾರಾಮಾರಿ ಮಾಡಿಕೊಂಡಿರೋ ಘಟನೆ ಶಿವಶಂಕರ ಕಾಲೋನಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ 6 ಜನರು ಗಾಯಗೊಂಡಿದ್ದಾರೆ.
ಹುಬ್ಬಳ್ಳಿಯ ಶಿವಶಂಕರ ಕಾಲೋನಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಅಂಚಟಗೇರಿ ಹಾಗೂ ಕೌದಿ ಕುಟುಂಬಸ್ಥರು ಹೊಡೆದಾಡಿಕೊಂಡಿದ್ದಾರೆ. ಇಟ್ಟಿಗೆ, ಕೋಲು ಹಿಡಿದು ನಡು ರಸ್ತೆಯಲ್ಲೇ ಬಡಿದಾಡಿಕೊಂಡಿದ್ದಾರೆ.
ಹೊಯ್ಸಳ ಪೊಲೀಸರು ಸ್ಥಳದಲ್ಲೇ ಇದ್ದರೂ ಕೌದಿ ಮತ್ತು ಅಂಚಟಗೇರಿ ಕುಟುಂಬಸ್ಥರು ಗಲಾಟೆ ಮಾಡಿಕೊಂಡು ಬಡಿದಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಆರು ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
BREAKING : ಕಿರ್ಗಿಸ್ತಾನ-ಚೀನಾ ಗಡಿಯಲ್ಲಿ 7.1 ತೀವ್ರತೆಯ ಪ್ರಭಲ ಭೂಕಂಪ, ಹಲವರಿಗೆ ಗಾಯ, |Earthquake
BREAKING: ಸೆನ್ಸೆಕ್ಸ್ 1,300 ಅಂಕಗಳ ಕುಸಿತ: ಹೂಡಿಕೆದಾರರ 5.9 ಲಕ್ಷ ಕೋಟಿ ರೂ. ಸಂಪತ್ತು ನಷ್ಟ!