ಮಹಾರಾಷ್ಟ್ರ: ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ (Eknath Shinde) ನೇತೃತ್ವದಲ್ಲಿ ಇಂದು ಜೆಪಿ ಮತ್ತು ಶಿವಸೇನೆಯ 18 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇಂದು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿಯ ಒಂಬತ್ತು ನಾಯಕರು ಮತ್ತು ಶಿವಸೇನೆಯ ಒಂಬತ್ತು ನಾಯಕರು 11:15 ರ ಸುಮಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನೂತನ ಸಚಿವರ ಪಟ್ಟಿ ಹೀಗಿದೆ…

ಬಿಜೆಪಿ: ಚಂದ್ರಕಾಂತ್ ಪಾಟೀಲ್, ಸುಧೀರ್ ಮುಂಗಂಟಿವಾರ್, ಗಿರೀಶ್ ಮಹಾಜನ್, ಸುರೇಶ್ ಖಾಡೆ, ರಾಧಾಕೃಷ್ಣ ವಿಖೆ ಪಾಟೀಲ್, ರವೀಂದ್ರ ಚವ್ಹಾಣ್, ಮಂಗಲ್ ಪ್ರಭಾತ್ ಲೋಧಾ, ವಿಜಯಕುಮಾರ್ ಗಾವಿತ್ ಮತ್ತು ಅತುಲ್ ಸೇವ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಶಿವಸೇನೆ: ದಾದಾ ಭೂಸೆ, ಶಂಭುರಾಜೇ ದೇಸಾಯಿ, ಸಂದೀಪನ್ ಬುಮ್ರೆ, ಉದಯ್ ಸಾಮಂತ್, ತಾನಾಜಿ ಸಾವಂತ್, ಅಬ್ದುಲ್ ಸತ್ತಾರ್, ದೀಪಕ್ ಕೇಸರ್ಕರ್, ಗುಲಾಬ್ರಾವ್ ಪಾಟೀಲ್ ಮತ್ತು ಸಂಜಯ್ ರಾಥೌಡ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇಂದು ಬೆಳಗ್ಗೆ ಮುಖ್ಯಮಂತ್ರಿಗಳು ತಮ್ಮ ದ್ವಿಸದಸ್ಯ ಸಚಿವ ಸಂಪುಟ ವಿಸ್ತರಣೆಗೆ ಮುನ್ನ ಶಿವಸೇನೆಯ ಶಾಸಕರನ್ನು ಭೇಟಿಯಾದರು. ಈ ಬಗ್ಗೆ ದಕ್ಷಿಣ ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಸಭೆ ನಡೆದಿದೆ. ಶಿವಸೇನೆಯ 55 ಶಾಸಕರ ಪೈಕಿ 40 ಶಾಸಕರು ಶಿಂಧೆ ಅವರನ್ನು ಬೆಂಬಲಿಸಿದ್ದಾರೆ.

BIGG NEWS : ಉತ್ತರಕನ್ನಡದಲ್ಲೂ ಮುಂದುವರಿದ ʼವರುಣನ ಆರ್ಭಟ ʼ : ಬನವಾಸಿಯ ರಾಜ್ಯ ಹೆದ್ದಾರಿ ಮೇಲೆ ʼಕುಸಿದು ಬಿದ್ದ ಬೃಹತ್‌ ಮರ ʼ

BREAKING NEWS : ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ʻ ಮತ್ತೊಂದು ಬಲಿ ʼ : ಶಿವಮೊಗ್ಗದಲ್ಲಿ ʻ ಮನೆ ಗೋಡೆ ಕುಸಿದು ಮಹಿಳೆ ಸಾವು ʼ , ಓರ್ವನ ಸ್ಥಿತಿ ಗಂಭೀರ

Breaking news:‌ ಮಹಿಳೆ ಮೇಲೆ ಹಲ್ಲೆ, ನಿಂದನೆ ಆರೋಪ: ಯುಪಿ ರಾಜಕರಣಿ ಶ್ರೀಕಾಂತ್ ತ್ಯಾಗಿ ಅರೆಸ್ಟ್

Share.
Exit mobile version