ಮೀರತ್‌(ಉತ್ತರ ಪ್ರದೇಶ): ನಗರದ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇಲೆ ನೋಯ್ಡಾ ಮೂಲದ ರಾಜಕಾರಣಿ ಶ್ರೀಕಾಂತ್ ತ್ಯಾಗಿ(Shrikant Tyagi)ಯನ್ನು ಉತ್ತರ ಪ್ರದೇಶ ಪೊಲೀಸರು ಇಂದು ಬಂಧಿಸಿದ್ದಾರೆ.

ಇಂದು ಶ್ರೀಕಾಂತ್ ತ್ಯಾಗಿಯನ್ನು ಮೀರತ್‌ನಲ್ಲಿ ಬಂಧಿಸಲಾಗಿದ್ದು, ಅವರನ್ನು ನೋಯ್ಡಾಗೆ ಹಿಂತಿರುಗಿಸಲಾಗುತ್ತಿದೆ ಎಂದು ವರದಿಯಾಗಿದೆ. ಇತ್ತೀಚಿನ ವೈರಲ್ ವೀಡಿಯೊದಲ್ಲಿ, ತ್ಯಾಗಿ ನೋಯ್ಡಾದ ಸೆಕ್ಟರ್ 93 ರ ಗ್ರಾಂಡ್ ಒಮ್ಯಾಕ್ಸ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮತ್ತು ನಿಂದನೆ ಮಾಡುತ್ತಿರುವುದು ಕಂಡುಬಂದಿದೆ. ಅಂದಿನಿಂದ ತ್ಯಾಗಿ ತಲೆಮರೆಸಿಕೊಂಡಿದ್ದರು.

ತಾನು ಭಾರತೀಯ ಜನತಾ ಪಕ್ಷದೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ತ್ಯಾಗಿ ಹೇಳಿಕೊಂಡಿದ್ದಾನೆ. ಗ್ರ್ಯಾಂಡ್ ಓಮ್ಯಾಕ್ಸ್‌ನಲ್ಲಿರುವ ನೆಲ ಅಂತಸ್ತಿನ ಅಪಾರ್ಟ್‌ಮೆಂಟ್‌ನ ಹೊರಗೆ ಅಕ್ರಮವಾಗಿ ನಿರ್ಮಿಸಿದ ಆರೋಪ ತ್ಯಾಗಿ ಮೇಲಿತ್ತು. ಅವನ ಸಹಾಯಕರು ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಗೆ ನುಗ್ಗಿ ಗದ್ದಲವನ್ನು ಸೃಷ್ಟಿಸಿದ ನಂತರ ವಿಷಯವು ಉಲ್ಬಣಗೊಂಡಿತು. ನಿನ್ನೆ ಉತ್ತರ ಪ್ರದೇಶ ಸರ್ಕಾರ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸಲು ಬುಲ್ಡೋಜರ್ ಅನ್ನು ಬಳಸಿತು. ಇದೇ ವೇಳೆ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

BIGG NEWS : ರಾಜ್ಯದಲ್ಲಿ `ಮುಖ್ಯಮಂತ್ರಿ ಬದಲಾವಣೆ’ ಬಗ್ಗೆ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಮಹತ್ವದ ಹೇಳಿಕೆ!

BREAKING NEWS : ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ʻ ಮತ್ತೊಂದು ಬಲಿ ʼ : ಶಿವಮೊಗ್ಗದಲ್ಲಿ ʻ ಮನೆ ಗೋಡೆ ಕುಸಿದು ಮಹಿಳೆ ಸಾವು ʼ , ಓರ್ವನ ಸ್ಥಿತಿ ಗಂಭೀರ

BIGG NEWS : ಉತ್ತರಕನ್ನಡದಲ್ಲೂ ಮುಂದುವರಿದ ʼವರುಣನ ಆರ್ಭಟ ʼ : ಬನವಾಸಿಯ ರಾಜ್ಯ ಹೆದ್ದಾರಿ ಮೇಲೆ ʼಕುಸಿದು ಬಿದ್ದ ಬೃಹತ್‌ ಮರ ʼ

Share.
Exit mobile version