ಅನಕಪಲ್ಲಿ : ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ರಿಯಾಕ್ಟರ್ ಸ್ಫೋಟಗೊಂಡಿದ್ದು, 18ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಚ್ಯುತಪುರಂ ವಿಶೇಷ ಆರ್ಥಿಕ ವಲಯದಲ್ಲಿ ಸ್ಫೋಟ ಸಂಭವಿಸಿದೆ.
ವಿಶೇಷ ಆರ್ಥಿಕ ವಲಯದಲ್ಲಿರುವ ಫಾರ್ಮಾ ಸಂಸ್ಥೆಯ ಘಟಕವಾದ ಎಸ್ಸಿಯೆಂಟಿಯಾ ಕಂಪನಿಯಲ್ಲಿ ಸ್ಫೋಟ ಸಂಭವಿಸಿದೆ. ಗಾಯಾಳುಗಳನ್ನು ಎನ್ಟಿಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಾಹ್ನದ ಊಟದ ಸಮಯದಲ್ಲಿ ಅಪಘಾತ ಸಂಭವಿಸಿದ್ದು, ದೊಡ್ಡ ಅನಾಹುತವೊಂದು ತಪ್ಪಿದೆ. ಘಟನಾ ಸ್ಥಳದ ದೃಶ್ಯಗಳು ರಿಯಾಕ್ಟರ್’ನಿಂದ ಹೊಗೆ ಹೊರಬರುತ್ತಿರುವುದನ್ನ ಮತ್ತು ಸುತ್ತಮುತ್ತಲಿನ ಗ್ರಾಮಗಳನ್ನ ಆವರಿಸಿರುವುದನ್ನು ತೋರಿಸುತ್ತದೆ.
Monkey Pox Alert : ಏಮ್ಸ್ ಮಾರ್ಗಸೂಚಿ ಬಿಡುಗಡೆ, ಈ ಲಕ್ಷಣಗಳು ಕಂಡುಬಂದ್ರೆ ತಕ್ಷಣ ಪ್ರತ್ಯೇಕಿಸಿ!