ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 17 ಜನರಿಗೆ ಕೊರೋನಾ ಸೋಂಕು ( Corona Virus ) ದೃಢಪಟ್ಟಿದೆ. ಹೀಗಾಗಿ ಸಕ್ರೀಯ ಪ್ರಕರಣಗಳ ಸಂಖ್ಯೆ 253ಗೆ ಏರಿಕೆಯಾಗಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಆರ್ ಟಿ ಪಿ ಸಿ ಆರ್ ಮೂಲಕ 257 ಹಾಗೂ ರಾಟ್ ಮೂಲಕ 19 ಸೇರಿದಂತೆ 276 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 17 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ ಎಂದು ತಿಳಿಸಿದೆ.
ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ ಇಬ್ಬರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿತರಾದ ಒಬ್ಬರು ಸರ್ಕಾರಿ, ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತ 250 ಸೋಂಕಿತರು ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದೆ.
ಅಂದಹಾಗೇ ಕರ್ನಾಟಕದಲ್ಲಿ ಇದುವರೆಗೆ 442 ಜನರಿಗೆ ಕೊರೋನಾ ಪಾಸಿಟಿವ್ ಬಂದಿದ್ದರೇ, 185 ಮಂದಿ ಗುಣಮುಖರಾಗಿದ್ದಾರೆ. ನಾಲ್ವರು ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇ.6.1ರಷ್ಟು ಆಗಿದೆ.
CRIME NEWS: ಸಂಸಾರ ಸಾಗಿಸೋಕೆ ಸರಗಳ್ಳತಕ್ಕೆ ಇಳಿದಿದ್ದ ಪ್ರೇಮಿಗಳು ಅರೆಸ್ಟ್!
ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ 2 ಲಕ್ಷ ರೂ. ಸಬ್ಸಿಡಿ ಸಾಲ.!