ಬೆಂಗಳೂರು: ವಿಧಾನಸಭೆ ಮತ್ತು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ವಿಧಆನ ಪರಿಷತ್ತಿಗೆ ಆಯ್ಕೆಯಾದಂತ 17 ನೂತನ ಸದಸ್ಯರು, ಇಂದು ಪ್ರಮಾಣವಚನ ಸ್ವೀಕರಿಸಿದರು.

ವಿಧಾನ ಪರಿಷತ್ತಿಗೆ ವಿಧಆನಸಭೆಯಿಂದ ಆಯ್ಕೆಯಾದ ಐವಾನ್ ಡಿಸೋಜಾ, ಕೆ.ಗೋವಿಂದರಾಜ್, ಜಗದೇವ ಗುತ್ತೇದಾರ್, ಬಿಲ್ಲೀಸ್ ಬಾನು, ಎನ್ ಎಸ್ ಬೋಸರಾಜು, ಡಾ.ಯತೀಂದ್ರ ಸಿದ್ಧರಾಮಯ್ಯ, ಎ ವಸಂತ ಕುಮಾರ್, ಮೂಳೆ ಮಾರುತಿ ರಾವ್, ಟಿಎನ್ ಜವರಾಯಿ ಗೌಡ, ಸಿಟಿ ರವಿ ಮತ್ತು ಎನ್ ರವಿಕುಮಾರ್ ಪ್ರಮಾಣವಚನ ಸ್ವೀಕರಿಸಿದರು.

ಅಲ್ಲದೇ ಪವೀಧರರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದಂತ ಚಂದ್ರಶೇಖರ ಪಾಟೀಲ್ ಬಸವರಾಜ, ಡಾ.ಧನಂಜಯ್ ಸರ್ಜಿ, ರಾಮೋಜಿಗೌಡ, ಎಸ್.ಎಲ್ ಬೋಜೇಗೌಡ, ಕೆ.ವಿವೇಕಾನಂದ ಮತ್ತು ಡಿ.ಟಿ ಶ್ರೀನಿವಾಸ್ ಅವರು ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸಚಿವ ಹೆಚ್.ಕೆ ಪಾಟೀಲ್ ಸೇರಿದಂತೆ ಇತರರು ಹಾಜರಿದ್ದರು.

BIG NEWS : ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ʻಫುಡ್ ಪಾರ್ಕ್ʼ ಸ್ಥಾಪಿಸುವಂತೆ ʻನಿಸ್ಸಿನ್ ಸಂಸ್ಥೆʼಗೆ ಆಹ್ವಾನ

BREAKING : ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಬಿಗ್‌ಟ್ವಿಸ್ಟ್‌ : ಪವಿತ್ರಾಗೌಡಗೆ 2 ಕೋಟಿ ಹಣ ನೀಡಿದ್ದು ಬೆಳಕಿಗೆ…!

Share.
Exit mobile version