ಬೆಂಗಳೂರು : ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ಫುಡ್ ಪಾರ್ಕ್ ಸ್ಥಾಪಿಸುವಂತೆ ʻನಿಸ್ಸಿನ್ ಸಂಸ್ಥೆʼಗೆ ಆಹ್ವಾನ ನೀಡಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವ ಎಂ.ಬಿ.ಪಾಟೀಲ್‌, ರಾಜ್ಯದಲ್ಲಿ ಬಂಡವಾಳ ಹೂಡಿಕೆ ವೃದ್ಧಿಸುವ ಗುರಿಯೊಂದಿಗೆ ಜಪಾನ್ ಪ್ರವಾಸ ಕೈಗೊಂಡಿದ್ದು, 6ದಶಕಗಳ ಇತಿಹಾಸವುಳ್ಳ ನಿಸ್ಸಿನ್ ಫುಡ್ಸ್ ಕಂಪೆನಿಗೆ ಈದಿನ ಭೇಟಿ ನೀಡಿ ಶ್ರೀ ರ್ಯೋಟಾ ಕವಾವಾ, ಮಿಸ್ ಮಿಚಿಕೊ ಕಾಕುಚಿ ಮತ್ತು ಮಿಸ್ ಕಾಯಾ ತಾನಿ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿದೆವು ಎಂದು ತಿಳಿಸಿದ್ದಾರೆ.

ವಿಜಯಪುರ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಫುಡ್ ಪಾರ್ಕ್ ಸ್ಥಾಪಿಸುವಂತೆ ನಿಸ್ಸಿನ್ ಸಂಸ್ಥೆಗೆ ಆಹ್ವಾನ ನೀಡಿದೆವು. ಫೆಬ್ರವರಿ 2025ರಲ್ಲಿ ಬೆಂಗಳೂರಿನಲ್ಲಿ ಜರುಗಲಿರುವ GIM2025 ರಲ್ಲಿ ‘ಇನ್ವೆಸ್ಟ್ ಕರ್ನಾಟಕ’ದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಣ ನೀಡಲಾಗಿದೆ ಎಂದು ಹೇಳಿದ್ದಾರೆ.

Share.
Exit mobile version