ಬೆಂಗಳೂರು: ರಾದ್ಯದಲ್ಲಿ ದಶಕಗಳಿಂದ ಅನಧಿಕೃತವಾಗಿ ಶಾಲೆಗಳು ನಡೆಯುತ್ತಿವೆ. ಇಂತಹ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಿದ್ದು, ಕೂಡಲೇ ಅನಧಿಕೃತ ಶಾಲೆಗಳನ್ನು ಮುಚ್ಚುವಂತೆ ಮತ್ತೊಮ್ಮೆ ಖಡಕ್ ಆದೇಶ ಹೊರಡಿಸಿದೆ.
2022-23ರ ಶೈಕ್ಷಣಿಕ ವರ್ಷದಲ್ಲಿ 1,316 ಶಾಲೆಗಳನ್ನು ಅನಧಿಕೃತ ಎಂದು ಶಿಕ್ಷಣ ಇಲಾಖೆ ಗುರುತಿಸಿತ್ತು. ಈಗ ಈ ಸಂಖ್ಯೆ 1,695ಕ್ಕೆ ಏರಿಕೆಯಾಗಿದೆ. ಈ ಪೈಕಿ 63 ರಾಜ್ಯ ಅಥವಾ ಕೇಂದ್ರ ಮಂಡಳಿಯ ಸಂಬಂಧವಿಲ್ಲದೇ ಕಾರ್ಯನಿರ್ವಹಿಸುತ್ತಿವೆ.
ಇನ್ನೂ 620 ಶಾಲೆಗಳು ಅನುಮತಿಯಿಲ್ಲದೇ ಹೆಚ್ಚುವರಿ ವಿಭಾಗಗಳನ್ನು ಆರಂಭಿಸಿದ್ದಾವೆ. 74 ಶಾಲೆಗಳು ಅನುಮದೋನೆ ಇಲ್ಲದೇ ಉನ್ನತ ಶ್ರೇಣಿಗಳನ್ನು ಪ್ರಾರಂಭಿಸಿವೆ. ಒಟ್ಟು 95 ಶಾಲೆಗಳು ರಾಜ್ಯ ಮಂಡಳಿಯ ಪಠ್ಯಕ್ರಮ ನೀಡಲು ಅನುಮತಿ ಹೊಂದಿದ್ದರೂ, ಮತ್ತೊಂದು ಬೋರ್ಡ್ ಪಠ್ಯಕ್ರಮವನ್ನು ನೀಡುವ ಮೂಲಕ ಪೋಷಕರು ಮತ್ತು ಮಕ್ಕಳನ್ನು ವಂಚಿಸುತ್ತಿರೋದಾಗಿ ಕಂಡು ಬಂದಿದೆ.
ಶಾಲಾ ಮಕ್ಕಳ ಪೋಷಕರಿಗೆ ಶಾಕಿಂಗ್ ನ್ಯೂಸ್ ಎನ್ನುವಂತೆ ರಾಜ್ಯದಲ್ಲಿನ 294 ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಬೋಧನೆಗೆ ಅನುಮತಿ ಪಡೆದು, ಶಿಕ್ಷಣ ನೀಡುತ್ತಿರೋದು ಮಾತ್ರ ಅನಧಿಕೃತವಾಗಿ ಆಂಗ್ಲ ಮಾಧ್ಯಮದಲ್ಲಿ ಆಗಿದ್ದಾವೆ.
ಪಿ.ಜಿ ಮಾಲೀಕರೇಗಮನಿಸಿ, ಈ ಮಾರ್ಗಸೂಚಿಗಳ ಪಾಲನೆ ಕಡ್ಡಾಯ, ಬೆಂಗಳೂರು ಪೊಲೀಸರಿಂದ ಎಚ್ಚರಿಕೆ