ಬೆಂಗಳೂರು: ವಿದೇಶಗಳಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳದ ಬೆನ್ನಲ್ಲೇ, ರಾಜ್ಯದಲ್ಲೂ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಇಂದು ಹೊಸದಾಗಿ 16 ಮಂದಿಗೊ ಕೋವಿಡ್ ಸೋಂಕು ದೃಢಪಟ್ಟಿದೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ 1,241ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 10 ಮಂದಿಗೆ, ಹಾಸನ, ಕೋಲಾರ ಮತ್ತು ವಿಜಯಪುರ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಹಾಗೂ ಮೈಸೂರಿನಲ್ಲಿ ಮೂವರು ಸೇರಿದಂತೆ 16 ಮಂದಿಗೆ ಇಂದು ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ.

ಇಂದು 16 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟ ಕಾರಣ ಸೋಂಕಿತರ ಸಂಖ್ಯೆ 40,71,776ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 13 ಸೇರಿದಂತೆ ಇದುವರೆಗೆ 40,30,228 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಈಗ ರಾಜ್ಯಾಧ್ಯಂತ 1,241 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.

BREAKING NEWS: ‘ಶೋ ಸೆಟ್’ನಲ್ಲಿಯೇ ‘ನಟಿ ತುನಿಶಾ ಶರ್ಮಾ’ ಆತ್ಮಹತ್ಯೆಗೆ ಶರಣು | Actor Tunisha Sharma dies by suicide

‘ಪಬ್ಲಿಕ್ ಪರೀಕ್ಷೆ’ಯಲ್ಲಿ ಭಯದಲ್ಲಿದ್ದ 5, 8ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಯಾರನ್ನು ಫೇಲ್ ಮಾಡಲ್ಲ – ಸಚಿವ ಬಿ.ಸಿ ನಾಗೇಶ್

ಕಾರಡಗಿಯಲ್ಲಿ 8 ಕೋಟಿ ರೂ. ವೆಚ್ಚದ 30 ಹಾಸಿಗೆ ಆಸ್ಪತ್ರೆ ನಿರ್ಮಾಣ – ಸಿಎಂ ಬಸವರಾಜ ಬೊಮ್ಮಾಯಿ

Share.
Exit mobile version