ಬೆಂಗಳೂರು: ರಾಜ್ಯದಲ್ಲಿ ಕೆಪಿಎಂಇ ನಿಯಮಗಳನ್ನು ಉಲ್ಲಂಘಿಸಿದಂತ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಆರೋಗ್ಯ ಇಲಾಖೆ ದಂಡದ ಮೂಲಕ ಬಿಗ್ ಶಾಕ್ ನೀಡಿದೆ. 16 ಸಂಸ್ಥೆಗಳ ವಿರುದ್ಧ ದಂಡಾಸ್ತ್ರ ಪ್ರಯೋಗಿಸಿದ್ದರೇ, 2 ಸಂಸ್ಥೆಗಳ ವಿರುದ್ಧ FIR ದಾಖಲಿಸಲಾಗಿದೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೆಪಿಎಂಇ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲಿನಿಕ್, ಪುನರ್ವಸತಿ ಕೇಂದ್ರಗಳ ಒಟ್ಟು 39 ಪ್ರಕರಣಗಳನ್ನು ಮಂಡಿಸಲಾಗಿತ್ತು. ಸದರಿ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳು ಈ ಕೆಳಕಂಡ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.
16 ಸಂಸ್ಥೆಗಳ ವಿರುದ್ಧ ದಂಡ
ಕೆಪಿಎಂಇ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಬೆಂಗಳೂರಿನ ಸುಂಕದಕಟ್ಟೆಯಲ್ಲಿನ ಕೀರ್ತನ ಫೌಂಡೇಶನ್ ಗೆ ರೂ.50,000 ದಂಡವನ್ನು ವಿಧಿಸಲಾಗಿದೆ. ಹೆಚ್ ಎಸ್ ಆರ್ ಲೇಔಟ್ ನ ಕೋಸ್ಮೆಡಿಕ್ಸ್ ಕ್ಲಿನಿಕ್ ಗೆ ರೂ.25,000 ದಂಡ ಹಾಕಲಾಗಿದೆ.
ಇನ್ನೂ ಗಿಡ್ಡಕೊನ್ನೇನಹಳ್ಳಿಯಲ್ಲಿನ ಅನನ್ಯ ಆಸ್ಪತ್ಪೆಗೆ ರೂ.50,000, ನೆಲಗದರನಹಳ್ಳಿ ಮುಖ್ಯ ರಸ್ತೆಯಲ್ಲಿನ ಸಮೃದ್ಧಿ ಡಯಾಗ್ನೋಸ್ಟಿಕ್ ಗೆ ರೂ.50,000, ಕುರುಬರಹಳ್ಳಿ ಮುಖ್ಯರಸ್ತೆಯಲ್ಲಿನ ಲೋಟಾಸ್ ಆಸ್ಪತ್ರೆಗೆ ರೂ.25,000 ದಂಡವನ್ನು ಹಾಕಲಾಗಿದೆ.
ಒಟ್ಟು 16 ಸಂಸ್ಥೆಗಳಿಗೆ ಕೆಪಿಎಂಇ ನಿಯಮ ಉಲ್ಲಂಘನೆ ಕಾರಣದಿಂದಾಗಿ ಬರೋಬ್ಬರಿ 7,35,000 ದಂಡವನ್ನು ಆರೋಗ್ಯ ಇಲಾಖೆ ವಿಧಿಸಿದೆ.
ಇನ್ನೂ ಯಲಹಂಕದ ರಾಯಲ್ ಪೈಲ್ಸ್ ಕ್ಲಿನಿಕ್ ಹಾಗೂ ಕೆ ಆರ್ ಪುರಂನಲ್ಲಿನ ಶ್ರೀ ಕಾಮಧೇನು ಪಂಚಗವ್ಯ ಚಿಕಿತ್ಸಾಲಯದ ವಿರುದ್ಧ ಎಫ್ಐಆರ್ ದಾಖಲಿಸಲು ಡಿಸಿ ಆದೇಶಿಸಿದ್ದರೇ, ಬಸವೇಶ್ವರ ನಗರ ಸಮೀಪದ ಸ್ಕಿನ್ ಡಿಸಿರೆಸ್ ಡೆರ್ಮಾಕೋ ಎನ್ನುವಂತ ಸ್ಕಿನ್ ರಿಲೇಟೆಡ್ ಕನ್ಸಲ್ಟೆಂಟ್ ಅನ್ನು ಸೀಜ್ ಮಾಡುವಂತೆ ಆದೇಶಿಸಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ
ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಮಾ.8ರಂದು ಕೊಡಗಿನಲ್ಲಿ ‘ಉದ್ಯೋಗ ಮೇಳ’ ಆಯೋಜನೆ
BIG UPDATE: ಮಂಗಳೂರು ಜೈಲಲ್ಲಿ ಖೈದಿಗಳಿಗೆ ಪುಡ್ ಪಾಯಿಸನ್ ಕೇಸ್: ಓರ್ವ ಕೈದಿಯ ಸ್ಥಿತಿ ಗಂಭೀರ