ವಾಷಿಂಗ್ಟನ್: ಅಮೆರಿಕದಿಂದ ಗಡೀಪಾರು ಮಾಡಲಾಗಿದ್ದ ಹರ್ಯಾಣದ ಕರ್ನಾಲ್ ಜಿಲ್ಲೆಯ ಹತ್ತೊಂಬತ್ತು ಮಂದಿಯನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಯುವಕರು ದೊಡ್ಡ ಮೊತ್ತದ ಹಣವನ್ನು ಪಾವತಿಸಿ ಅಕ್ರಮ ಮಾರ್ಗಗಳ ಮೂಲಕ ಯುಎಸ್ಗೆ ಹೋಗಿದ್ದರು.
ಗಡೀಪಾರು ಮಾಡಲಾದ ಭಾರತೀಯರನ್ನು ಹೊತ್ತ ವಿಮಾನ ಶನಿವಾರ ರಾತ್ರಿ ದೆಹಲಿಗೆ ಆಗಮಿಸಿದ್ದು, ನಂತರ ಅಧಿಕಾರಿಗಳು ಗುಂಪನ್ನು ದೆಹಲಿಯಿಂದ ಕರ್ನಾಲ್ಗೆ ಕರೆತಂದರು ಎಂದು ಡಿಎಸ್ಪಿ ಸಂದೀಪ್ ಮಾಹಿತಿ ನೀಡಿದರು. ಎಲ್ಲಾ ೧೬ ಮಂದಿಯನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಮತ್ತು ಅವರು ಯುಎಸ್ ಗೆ ಹೇಗೆ ಪ್ರಯಾಣಿಸಿದರು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಯುಎಸ್ 1,563 ಭಾರತೀಯ ಪ್ರಜೆಗಳನ್ನು ಗಡೀಪಾರು ಮಾಡಿದೆ ಎಂದು ಜುಲೈನಲ್ಲಿ ವಿದೇಶಾಂಗ ಸಚಿವಾಲಯ (ಎಂಇಎ) ಮಾಹಿತಿ ನೀಡಿತ್ತು. ಗಡೀಪಾರು ಮಾಡಲ್ಪಟ್ಟವರಲ್ಲಿ ಹೆಚ್ಚಿನವರನ್ನು ವಾಣಿಜ್ಯ ವಿಮಾನಗಳಲ್ಲಿ ವಾಪಸ್ ಕಳುಹಿಸಲಾಗಿದೆ.
“ಈ ವರ್ಷದ ಜನವರಿ 20 ರಿಂದ, ನಿನ್ನೆಯವರೆಗೆ, ಇದುವರೆಗೆ ಸುಮಾರು 1,563 ಭಾರತೀಯ ಪ್ರಜೆಗಳನ್ನು ಯುನೈಟೆಡ್ ಸ್ಟೇಟ್ಸ್ನಿಂದ ಗಡೀಪಾರು ಮಾಡಲಾಗಿದೆ. ಈ ಭಾರತೀಯ ಪ್ರಜೆಗಳಲ್ಲಿ ಹೆಚ್ಚಿನವರು ವಾಣಿಜ್ಯ ವಿಮಾನದ ಮೂಲಕ ಬಂದಿದ್ದಾರೆ” ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಸಂಸತ್ತಿನಲ್ಲಿ ವಿದೇಶಾಂಗ ಸಚಿವಾಲಯ ಮಂಡಿಸಿದ ಅಂಕಿಅಂಶಗಳು ಯುನೈಟೆಡ್ ಸ್ಟೇಟ್ಸ್ ಡೆಪೋ ಎಂದು ತೋರಿಸಿವೆ








