ಬೆಂಗಳೂರು: ರಾಜ್ಯಾಧ್ಯಂತ ಡೆಂಗ್ಯೂ ಪ್ರಕರಣಗಳು ಆರ್ಭಟಿಸಿವೆ. ಇಂದು ಹೊಸದಾಗಿ 155 ಮಂದಿಗೆ ಡೆಂಗ್ಯೂ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇವರಲ್ಲಿ ಬೆಂಗಳೂರಲ್ಲೇ ಅತೀ ಹೆಚ್ಚು ದಾಖಲಾಗಿದ್ದಾವೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ 899 ಮಂದಿಯನ್ನು ಡೆಂಗ್ಯೂ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 155 ಮಂದಿಗೆ ಡೆಂಗ್ಯೂ ಪಾಸಿಟಿವ್ ಎಂದು ವರದಿಯಲ್ಲಿ ತಿಳಿದು ಬಂದಿದೆ. ಹೀಗಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 6,831ಕ್ಕೆ ಏರಿಕೆಯಾಗಿದೆ ಅಂತ ತಿಳಿಸಿದೆ.
ಇನ್ನೂ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದು 430 ಮಂದಿಗೆ ಪರೀಕ್ಷೆ ಮಾಡಲಾಗಿದ್ದು ಅವರಲ್ಲಿ 107 ಜನರಿಗೆ ಡೆಂಗ್ಯೂ ಪಾಸಿಟಿವ್ ಅಂತ ವರದಿಯಲ್ಲಿ ದೃಢಪಟ್ಟಿದೆ. ಚಿತ್ರದುರ್ಗದಲ್ಲಿ 67 ಪರೀಕ್ಷೆಯಲ್ಲಿ 10 ಮಂದಿಗೆ, ದಾವಣಗೆರೆಯಲ್ಲಿ 9 ಪರೀಕ್ಷೆಯಲ್ಲಿ ನಾಲ್ವರಿಗೆ, ಶಿವಮೊಗ್ಗದಲ್ಲಿ 103 ಪರೀಕ್ಷೆಯಲ್ಲಿ 9 ಜನರಿಗೆ, ಉತ್ತರ ಕನ್ನಡದಲ್ಲಿ ಇಬ್ಬರು, ವಿಜಯಪುರದಲ್ಲಿ 100 ಪರೀಕ್ಷೆಯಲ್ಲಿ ನಾಲ್ವರಿಗೆ ಡೆಂಗ್ಯೂ ಪಾಸಿಟಿವ್ ಎಂದು ದೃಢಪಟ್ಟಿದೆ.
ಇನ್ನೂ ಹಾಸನದಲ್ಲಿ 124 ಪರೀಕ್ಷೆ ಮಾಡಲಾಗಿದ್ದು, 16 ಮಂದಿಗೆ ಡೆಂಗ್ಯೂ ಪಾಸಿಟಿವ್ ಬಂದ್ರೇ, ಉಡುಪಿಯಲ್ಲಿ 64 ಮಂದಿಯಲ್ಲಿ ಮೂವರಿಗೆ ಡೆಂಗ್ಯೂ ಪಾಸಿಟಿವ್ ಅಂತ ತಿಳಿದು ಬಂದಿದೆ. ಒಟ್ಟಾರೆ 899 ಮಂದಿಯನ್ನು ಇಂದು ಡೆಂಗ್ಯೂ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, 155 ಮಂದಿಗೆ ಪಾಸಿಟಿವ್ ಅಂತ ದೃಢಪಟ್ಟಿದೆ. ರಾಜ್ಯದಲ್ಲಿ ಡೆಂಗ್ಯೂ ಸಕ್ರೀಯ ಪ್ರಕರಣಗಳ ಸಂಖ್ಯೆ 142 ಆಗಿದೆ. ಇದುವರೆಗೆ ರಾಜ್ಯಾಧ್ಯಂತ 6 ಜನರು ಡೆಂಗ್ಯೂ ನಿಂದ ಸಾವನ್ನಪ್ಪಿದ್ದಾರೆ ಅಂತ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
‘ಮುಖ್ಯಮಂತ್ರಿ ಕುರ್ಚಿ’ ಮೇಲೆ ಕಣ್ಣಿಟ್ಟವರಿಂದಲೇ ‘ಮುಡಾ ಹಗರಣ’ ಬಹಿರಂಗ: ‘HDK’ ಗಂಭೀರ ಆರೋಪ
‘ನಮ್ಮ ಮೆಟ್ರೋ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ನಾಳೆಯಿಂದ ಈ ಮಾರ್ಗದಲ್ಲಿ ’15 ರೈಲು’ಗಳು ಸಂಚಾರ | Namma Metro