ಬೆಂಗಳೂರು: ನಗರದಲ್ಲಿ ನೀರಿನ ಅಭಾವ ಹೆಚ್ಚಾದಂತೆ ನೀರಿನ ಟ್ಯಾಂಕರ್ ಗಳು ದರ ಹೆಚ್ಚಳ ಮಾಡಿ, ಜನಸಾಮಾನ್ಯರಿಗೆ ದುಬಾರಿ ದರದ ಶಾಕ್ ನೀಡಿದ್ದವು. ಇವುಗಳಿಗೆ ಮೂಗು ದಾರ ಹಾಕೋ ಸಲುವಾಗಿ ರಾಜ್ಯ ಸರ್ಕಾರದಿಂದ ನೀರಿನ ಟ್ಯಾಂಕರ್ ಸ್ವಯಂ ನೋಂದಣಿಗೆ ಇಂದಿನವರೆಗೆ ಡೆಡ್ ಲೈನ್ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಈವರೆಗೆ 1,391 ನೀರಿನ ಟ್ಯಾಂಕರ್ ಸ್ವಯಂ ನೋಂದಣಿ ಆಗಿದ್ದಾರೆ.
ಈ ಕುರಿತಂತೆ ಬಿಬಿಎಂಪಿಯಿಂದ ಮಾಹಿತಿ ನೀಡಲಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವ 1391 ಟ್ಯಾಂಕರ್ ಮಾಲೀಕರು ದಿನಾಂಕ: 6.00 ಗಂಟೆಯ ವೇಳೆಗೆ ಸ್ವಯಂ ನೋಂದಣಿ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದೆ.
ಪಾಲಿಕೆಯು ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ಪೋರ್ಟಲ್‌ನಲ್ಲಿ https://bbmp.oasisweb.in/TankerManagement/SelfRegistration.aspx ಎಲ್ಲಾ ನೀರಿನ ಟ್ಯಾಂಕರ್ ಮಾಲೀಕರು ದಿನಾಂಕ: 01-03-2024 ರಿಂದ 07-03-2024 ರವರೆಗೆ ಸ್ವಯಂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಸಂಜೆ 6.00 ಗಂಟೆಯ ವೇಳೆಗೆ 1391 ಟ್ಯಾಂಕರ್ ಗಳು ನೊಂದಣಿ ಮಾಡಿಕೊಂಡಿರುತ್ತವೆ ಎಂದು ಮಾಹಿತಿ ನೀಡಿದೆ.
‘ರಾಜ್ಯ ಸರ್ಕಾರ’ದಿಂದ ‘11,307 ಪೌರಕಾರ್ಮಿಕ’ರ ‘ಖಾಯಂ’ ಕುರಿತಂತೆ ಮಹತ್ವದ ಆದೇಶ
BIG BREAKING: 5, 8, 9 ಮತ್ತು 11ನೇ ತರಗತಿ ‘ಬೋರ್ಡ್ ಪರೀಕ್ಷೆ’ಗೆ ‘ಹೈಕೋರ್ಟ್ ಗ್ರೀನ್ ಸಿಗ್ನಲ್’