ಡೆಹ್ರಾಡೂನ್ : ಸುಮಾರು 23 ಪ್ರಯಾಣಿಕರನ್ನು ಹೊತ್ತ ಟೆಂಪೋ ಟ್ರಾವೆಲರ್ ಕಮರಿಗೆ ಬಿದ್ದ ಘಟನೆ ರುದ್ರಪ್ರಯಾಗದ ಹೃಷಿಕೇಶ್-ಬದರೀನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ. ಈ ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ಎಫ್) ತಂಡಗಳು ಸ್ಥಳದಲ್ಲೇ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಕಮರಿಗೆ ಬಿದ್ದ ವಾಹನವು ನೋಯ್ಡಾದಿಂದ ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
#BREAKING | Death toll rises to 10
The death toll in the accident in which a tempo traveller fell into a deep gorge near Rudraprayag has now risen to 10: IG Garhwal
Tune in here for all the latest updates: https://t.co/wCIfszCuXb#Rudraprayag #Dehradun pic.twitter.com/zruXzmpPBZ
— Republic (@republic) June 15, 2024
12 ಮಂದಿ ಸಾವು, 7 ಮಂದಿಯನ್ನು ಏರ್ ಲಿಫ್ಟ್ ಮಾಡಿ ಏಮ್ಸ್ ರಿಷಿಕೇಶ್ ಆಸ್ಪತ್ರೆಗೆ ದಾಖಲು
ಕಮರಿಗೆ ಬಿದ್ದ ವಾಹನದಲ್ಲಿ ಪ್ರಯಾಣಿಸುತ್ತಿದ್ದ 12 ಜನರು ಸಾವನ್ನಪ್ಪಿದ್ದಾರೆ ಮತ್ತು 7 ಗಂಭೀರ ರೋಗಿಗಳನ್ನು ಏಮ್ಸ್ ರಿಷಿಕೇಶಕ್ಕೆ ಸಾಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಗಾಯಗೊಂಡ 7 ಪ್ರಯಾಣಿಕರನ್ನು ರುದ್ರಪ್ರಯಾಗದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಜ್ಯ ನೋಡಲ್ (ಆರೋಗ್ಯ) ವಿಪತ್ತುಗಳ ಸಹಾಯಕ ನಿರ್ದೇಶಕ ಡಾ.ಬಿಮ್ಲೇಶ್ ಜೋಶಿ ತಿಳಿಸಿದ್ದಾರೆ.
#WATCH | Rudraprayag Tempo Traveller accident: "We have received information that there were 23 people in the Tempo Traveller. Around 15 injured people have been sent to hospital for treatment. Rescue operation is underway, " says Rudraprayag SP Vishakha Ashok Bhadane
(Video… pic.twitter.com/z2Xcph3uAZ
— ANI (@ANI) June 15, 2024
ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಕೇಸ್: ಜೂ.28ರಂದು ರಾಜ್ಯಾಧ್ಯಂತ ಪ್ರತಿಭಟನೆಗೆ ಬಿಜೆಪಿ ನಿರ್ಧಾರ
ಭಾರತದಲ್ಲಿ ಈ ಆಹಾರಗಳ ಸೇವನೆ ನಿಷೇಧ : ಇಲ್ಲಿದೆ ನೋಡಿ ʻFSSAIʼ ನ ನಿಷೇಧಿತ ಆಹಾರಗಳ ಪಟ್ಟಿ | Banned Foods