ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 113 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ವರದಿಯಿಂದ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 114 ಮಂದಿ ಗುಣಮುಖರಾಗಿದ್ದಾರೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ರಿಪೋರ್ಟ್ ( Covid19 Report ) ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ 3208 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ಇವರಲ್ಲಿ 113 ಜನರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿರೋದಾಗಿ ತಿಳಿಸಿದೆ.
ಬೆಂಗಳೂರು ನಗರದಲ್ಲಿ 40, ಬಳ್ಳಾರಿ 03, ಬೆಳಗಾವಿ 01, ಬೆಂಗಳೂರು ಗ್ರಾಮಾಂತರ 02, ಬೀದರ್, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಧಾರವಾಡ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ, ಚಾಮರಾಜನಗರ 04, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 05 ಜನರಿಗೆ ಕೊರೋನಾ ಸೋಂಕು ( Coronavirus Case ) ತಗುಲಿರೋದಾಗಿ ಹೇಳಿದೆ.
ಗದಗ 03, ಕಲಬುರ್ಗಿ 04, ಮಂಡ್ಯ 05, ಮೈಸೂರು 12, ರಾಯಚೂರು 04, ತುಮಕೂರು 10 ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ 113 ಜನರಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ 114 ಜನರು ಗುಣಮುಖರಾದ ಕಾರಣ, ರಾಜ್ಯದಲ್ಲಿ ಈಗ 958 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.
BIG NEWS: ದಾವಣಗೆರೆಯಲ್ಲಿ ‘ದರ್ಶನ್ ಅಭಿಮಾನಿ’ಯಿಂದ ವಿಕೃತಿ: ಯುವಕನ ಕೈ ಮೇಲೆ ಕರ್ಪೂರ ಹಚ್ಚಿ, ಬಸ್ಕಿ ಶಿಕ್ಷೆ
BREAKING: ಮಣಿಪುರದಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ಅದ್ಧೂರಿ ಚಾಲನೆ