ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸೋಮೆರಾಹಳ್ಳಿ ತಾಂಡದ ಬಳಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನುನಿಲ್ಲಿಸುವಲ್ಲಿ 112 ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಬಾಲ್ಯವಿವಾಹವನ್ನು ತಡೆಗಟ್ಟಿದ್ದಾರೆ.
ಈ ಬಗ್ಗೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ:16.05.2025 ರಂದು ಹಿರಿಯೂರು ತಾಲ್ಲೂಕಿನ ಸೋಮೆರಾಹಳ್ಳಿ ತಾಂಡದ ಬಳಿ ಬಾಲ್ಯ ವಿವಾಹ ನಡೆಯುತ್ತಿರುತ್ತದೆ ಎಂದು ಡಯಲ್-II2ಗೆ ಕರೆ ಬಂದಿದ್ದು, ತಕ್ಷಣವೇ ಇ.ಆರ್.ಎಸ್.ಎಸ್ ಕೇಂದ್ರದ ಸಿಬ್ಬಂದಿಯಾದ ತಿಪ್ಪೇಸ್ವಾಮಿ ಎ ಹೆಚ್‌ಸಿಡಬ್ಲ್ಯೂ ಅವರು ಹೊಯ್ಸಳ-06 ವಾಹನಕ್ಕೆ ವಿಷಯವನ್ನು ತಿಳಿಸಿದ್ದು, ಕೂಡಲೇ ವಾಹನದ ಅಧಿಕಾರಿ ಮರುಡಪ್ಪ ಮತ್ತು ಚಾಲಕರಾದ ಮುಬಾರಕ್ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಘಟನಾ ಸ್ಥಳವಾದ ಸೋಮೆರಾಹಳ್ಳಿ ತಾಂಡದ ಹತ್ತಿರ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ವಧು ರವರಿಗೆ ಮದುವೆಯ ವಯಸ್ಸು ಪೂರ್ಣಗೊಳ್ಳಲು ಇನ್ನೂ 04 ವರ್ಷ 05 ತಿಂಗಳುಗಳು ಬಾಕಿ ಇರುವುದು ಖಚಿತವಾಗಿದೆ.
ಈ ಬಗ್ಗೆ ಮೇಲಾಧಿಕಾರಿಗಳಿಗೆ ಹಾಗೂ ಸಿಡಿಪಿಒ ರವರಿಗೆ ಮಾಹಿತಿ ತಿಳಿಸಿದ್ದು ನಂತರ ಸ್ಥಳಕ್ಕೆ ಬಂದ ಸಿಡಿಪಿಒ ಕಚೇರಿಯ ಮೇಲ್ವಿಚಾರಕಿಯಾದ ತಾಯಿ ಮುದ್ದಮ್ಮ ಹಾಗೂ ಅಂಗನವಾಡಿ ಸಹಾಯಕಿ ಕವಿತಾ ರವರ ಸುಪರ್ದಿಗೆ ಒಪ್ಪಿಸಿರುತ್ತಾರೆ. ಈ ಮೂಲಕ ಸರಿಯಾದ ಸಮಯಕ್ಕೆ ಘಟನಾ ಸ್ಥಳಕ್ಕೆ ಹೋಗಿ, ಅಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಂತಹ ಹೊಯ್ಸಳ-06 ರ ವಾಹನದ ಪೊಲೀಸರ ಕಾರ್ಯವನ್ನು ರಂಜಿತ್ ಕುಮಾ ಬಂಡಾರು ಐ.ಪಿ.ಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರವರು ಶ್ಲಾಘಿಸಿರುತ್ತಾರೆ. ಯಾವುದೇ ತುರ್ತು ಪರಿಸ್ಥಿತಿ ಇರಲಿ ಒಂದೇ ಸಂಖ್ಯೆ 112ಗೆ ಕರೆ ಮಾಡಿ ಎಂಬುದಾಗಿ ಮನವಿ ಮಾಡಿದೆ.
ಹಿರಿಯೂರು ತಾಲ್ಲೂಕಿನ ಸೋಮೆರಾಹಳ್ಳಿ ತಾಂಡದ ಬಳಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ನಿಲ್ಲಿಸುವಲ್ಲಿ ಯಶಸ್ವಿಯಾದ 112 ಸಿಬ್ಬಂದಿ.@DgpKarnataka @igperdvg pic.twitter.com/stRERcPIsX
— Chitradurga District Police (@spchitradurga) May 18, 2025