ಬೆಂಗಳೂರು: ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿತ್ತು. ಈ ಪರೀಕ್ಷೆಯಲ್ಲಿ 100 ಅಂಕಕ್ಕೆ 111 ಅಂಕ, 600ಕ್ಕೆ 683 ಅಂಕ ನೀಡಿ ಪಿಯು ಬೋರ್ಡ್ ಮಹಾ ಎಡವಟ್ಟು ಮಾಡಿರುವುದು ಬೆಳಕಿಗೆ ಬಂದಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಂತ ವಿದ್ಯಾರ್ಥಿಯೊಬ್ಬನಿಗೆ ಹಿಂದಿ ಪರೀಕ್ಷೆಯಲ್ಲಿ 100 ಅಂಕಗಳಿದ್ದರೂ, 111 ಅಂಕಗಳನ್ನು ನೀಡಿ ಎಡವಟ್ಟು ಮಾಡಲಾಗಿದೆ. ಹಿಂದಿ ವಿಷಯದ ಥಿಯರಿಯಲ್ಲಿ ವಿದ್ಯಾರ್ಥಇ 94 ಅಂಕ ಬಂದಿದ್ದರೇ, ಕಾಲೇಜಿನಿಂದ 17 ಆಂತರೀಕ ಅಂಕಗಳನ್ನು ನೀಡಲಾಗಿದೆ. ಇಲ್ಲಿ 80 ಅಂಕಗಳಿಗೆ 94 ಅಂಕ ನೀಡಿದ್ದು ಹೇಗೆ ಎನ್ನುವಂತ ಯಕ್ಷ ಪ್ರಶ್ನೆ ಕಾಡುತ್ತಿದೆ.

ಇನ್ನೂ ದ್ವಿತೀಯ ಪಿಯುಸಿ ಒಟ್ಟು ಪರೀಕ್ಷೆಯ ಅಂಕಗಳು 600 ಆಗಿವೆ. ಆದರೇ ಓರ್ವ ವಿದ್ಯಾರ್ಥಿಗೆ 600 ಅಂಕಗಳಿಗೆ 683 ನೀಡಲಾಗಿದೆ. 6 ವಿಷಯದಲ್ಲೂ 100 ಅಂಕಗಳಿಗೆ 100ಕ್ಕೂ ಹೆಚ್ಚು ಅಂಕ ನೀಡಿದ್ದರ ಪರಿಣಾಮ 683 ಅಂಕಗಳನ್ನು ಪಡೆದಿರುವುದಾಗಿ ತಪ್ಪಾಗಿ ನಮೂದಿಸಿ ಎಡವಟ್ಟು ಮಾಡಲಾಗಿದೆ.
ಇದಷ್ಟೇ ಎಲ್ಲದೇ ಡಿಜಿ ಲಾಕರ್ ನಲ್ಲಿ ಕೆಲವರ ಅಂಕಪಟ್ಟಿ ಸರಿಯಾಗಿ ಬಂದಿದ್ದರೇ, ಮತ್ತೆ ಕೆಲವರದ್ದು ತಪ್ಪಾಗಿವೆ. ಹೀಗಾಗಿ ಜವಾಬ್ದಾರಿಯುತವಾಗಿ ಫಲಿತಾಂಶ ಪ್ರಕಟಿಸಬೇಕಾದಂತ ಪಿಯು ಬೋರ್ಡ್ ಈ ಬಾರಿ ಪರೀಕ್ಷೆಯಲ್ಲಿ ತಪ್ಪು ತಪ್ಪು ಫಲಿತಾಂಶ ನೀಡಿ, ವಿದ್ಯಾರ್ಥಿಗಳನ್ನು ಹಾಗೂ ಅವರ ಪೋಷಕರನ್ನು ಗೊಂದಲಕ್ಕೆ ದೂಡಿದೆ.
BREAKING: ಹುಲಿಕಲ್ ಘಾಟ್ ದುರಂತ: ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ








