Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಂತು ‘ಡೆಂಗ್ಯೂ ಲಸಿಕೆ’: ಭಾರತದಲ್ಲಿ ಜಪಾನ್‌ನ ‘ಟಕೆಡಾ’ ಲಸಿಕೆ ತುರ್ತು ಬಳಕೆಗೆ ತಜ್ಞರ ಸಮಿತಿ ಒಪ್ಪಿಗೆ! Dengue Vaccine

30/03/2026 5:45 PM

ಅಡಿಕೆ ಧಾರಣೆ: ಶಿವಮೊಗ್ಗ ಮತ್ತು ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ವಾರದ ಮೊದಲ ದಿನವೇ ಅಡಿಕೆ ಬೆಲೆ ಭಾರಿ ಏರಿಕೆ.!

30/03/2026 5:34 PM

Good News ; ಸಾಲಗಾರರಿಗೆ ಭರ್ಜರಿ ಗುಡ್ ನ್ಯೂಸ್ ; 6 ತಿಂಗಳವರೆಗೆ ‘EMI ಪಾವತಿ’ ವಿನಾಯಿತಿಗೆ ಸರ್ಕಾರ ನಿರ್ಧಾರ!

30/03/2026 5:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ಶೀಘ್ರವೇ ರಾಜ್ಯದಲ್ಲಿ 11 ಸರ್ಕಾರಿ ಬ್ಲಡ್ ಬ್ಯಾಂಕ್ ಅನುಷ್ಠಾನ: ಸಚಿವ ದಿನೇಶ್ ಗುಂಡೂರಾವ್
KARNATAKA

GOOD NEWS: ಶೀಘ್ರವೇ ರಾಜ್ಯದಲ್ಲಿ 11 ಸರ್ಕಾರಿ ಬ್ಲಡ್ ಬ್ಯಾಂಕ್ ಅನುಷ್ಠಾನ: ಸಚಿವ ದಿನೇಶ್ ಗುಂಡೂರಾವ್

By kannadanewsnow0918/06/2025 6:25 AM

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 11 ಸರ್ಕಾರಿ ಬ್ಲಡ್‌ ಬ್ಯಾಂಕ್‌ಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲದೇ, ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹಿಸುವ ನಾಲ್ಕು ಸರ್ಕಾರಿ ಬ್ಲಡ್‌ ಬ್ಯಾಂಕ್‌ಗಳನ್ನು ರೀಜನಲ್‌ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಬ್ಲಡ್‌ ಬ್ಯಾಂಕ್‌ಗಳಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವರಾದ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. 

ರಾಜ್ಯದಲ್ಲಿ ಹೊಸದಾಗಿ 11 ಸರ್ಕಾರಿ ಬ್ಲಡ್‌ ಬ್ಯಾಂಕ್‌ಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲದೇ, ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹಿಸುವ ನಾಲ್ಕು ಸರ್ಕಾರಿ ಬ್ಲಡ್‌ ಬ್ಯಾಂಕ್‌ಗಳನ್ನು ರೀಜನಲ್‌ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಬ್ಲಡ್‌ ಬ್ಯಾಂಕ್‌ಗಳಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ… pic.twitter.com/nRRN5pdoLF

— DIPR Karnataka (@KarnatakaVarthe) June 17, 2025

ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಿದ ರಕ್ತ ಸಂಗ್ರಹಣೆಯ ಗುರಿಗಿಂತ ಶೇ 124 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಖಡ 1ರಷ್ಟು ಜನರಿಗೆ ರಕ್ತದ ಅವಶ್ಯಕತೆ ಇದ್ದು ಅದಕ್ಕೆ ಅನುಗುಣವಾಗಿ 2024-25ರಲ್ಲಿ 8,15,402 ರಕ್ತದ ಯುನಿಟ್ ಗಳನ್ನು ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿತ್ತು. ಸದರಿ ಸಾಲಿನಲ್ಲಿ 10,11,073 ರಕ್ತದ ಯುನಿಟ್‌ಗಳನ್ನು ಸಂಗ್ರಹಿಸುವ ಮೂಲಕ ಶೇ.124%ರಷ್ಟು ಪ್ರಗತಿ ಸಾಧಿಸಲಾಗಿದೆ. ರಕ್ತದಾನಿಯಗಳ ದಿನಾಚರಣೆಯನ್ನು ಆಚರಿಸುವ ಮೂಲಕ ರಕ್ತದಾನಕ್ಕೆ ಪ್ರೋತ್ಸಾಹಿಸಲಾಗುತ್ತಿದೆ. 1 ಯುನಿಟ್ ರಕ್ತವು 4 ಜೀವಗಳನ್ನು ಉಳಿಸಬಹುದು. ಹೀಗಾಗಿ ನಮ್ಮ ಯುವಕ ಯುವತಿಯರು ರಕ್ತದಾನಕ್ಕೆ ಮುಂದಾಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ರಾಜ್ಯ ಸರ್ಕಾರದಿಂದ ರಕ್ತ ಸಂಗ್ರಹಣೆಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ತಾಯಂದಿರ ಸಾವುಗಳನ್ನು ತಡೆಯುವಲ್ಲಿ ರಕ್ತದ ಪಾತ್ರ ಪ್ರಮುಖವಾಗಿದೆ. ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ರಕ್ತ ಸಂಗ್ರಹಣೆಯ ವ್ಯವಸ್ಥೆ ಇರಲಿಲ್ಲ. ಇದೀಗ ಎಲ್ಲ 147 ತಾಲೂಕು ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ರಕ್ತ ಸಂಗ್ರಹಣೆ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಅಗತ್ಯ ಉಪಕರಣಗಳ ಖರೀದಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.

ಹೊಸದಾಗಿ 11 ಸರ್ಕಾರಿ ರಕ್ತ ಕೇಂದ್ರಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗೆ ಬರುವ ಬಡಜನರಿಗೆ ರಕ್ತ ಮತ್ತದರ ಅಂಗಾಂಶಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಅಲ್ಲದೇ ದೇಶದಲ್ಲಿಯೇ ಪ್ರಥಮ ಭಾರಿಗೆ ರಾಜ್ಯದಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹಿಸುವ 4 ಸರ್ಕಾರಿ ರಕ್ತ ಕೇಂದ್ರಗಳನ್ನು ರೀಜನಲ್ ಸೆಂಟರ್ ಆಫ್ ಎಕ್ಸಲೆನ್ಸ್ (Regional Centre of Excellance) ರಕ್ತ ಕೇಂದ್ರಗಳಾಗಿ ಮೇಲ್ದರ್ಜೇಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿ ನುರಿತ ತಜ್ಞರಿಂದ ಎಲ್ಲಾ ರಕ್ತ ಕೇಂದ್ರಗಳಿಗೆ ತರಬೇತಿ ಕಾರ್ಯಕ್ರಮಗಳು, ಜಿಲ್ಲೆಗಳಲ್ಲಿ ರಕ್ತದ ಕೊರತೆಯಿರುವ ರಕ್ತ ಕೇಂದ್ರಗಳಿಗೆ, ರಕ್ತ ಶೇಖರಣಾ ಘಟಕಗಳಿಗೆ ಹಾಗೂ ಆಸ್ಪತ್ರೆಗಳಿಗೆ ಸಮರ್ಪಕವಾದ, ಸುರಕ್ಷಿತ, ಮತ್ತು ಗುಣಮಟ್ಟದ ರಕ್ತವನ್ನು ಒದಗಿಸುವುದನ್ನು ಖಚಿತಪಡಿಸುವುದರ ಮುಖಾಂತರ ಕರ್ನಾಟಕ ರಾಜ್ಯವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರಕ್ತದ ಗುಣಮಟ್ಟವನ್ನು ಕಾಯ್ದುಕೊಳ್ಳಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಎಂದರು.

ಸರ್ಕಾರದ ವತಿಯಿಂದ 9 ರಕ್ತ ಸಾಗಣಿಕ ವಾಹನಗಳು ಚಾಲನೆಯಲ್ಲಿದೆ. 7 ರಕ್ತ ಸಾಗಣಿಕ (Blood Colleciton and Transportation Van) ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ 4 ರಕ್ತ ಸಾಗಣಿಕ ಮತ್ತು ರಕ್ತ ಸಂಗ್ರಹಣಾ ವಾಹನ (BCTV) ಗಳ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದ್ದು ಶೀಘ್ರದಲ್ಲೆ ರಕ್ತ ಸಂಗ್ರಹಣೆ ಮತ್ತು ಸಾಗಣಿಕೆ ಸೇವೆಗೆ ಅನುವು ಮಾಡಿಕೊಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಆರೋಗ್ಯ ಸಚಿವರಾಗಿ ಸ್ವತಃ ದಿನೇಶ್ ಗುಂಡೂರಾವ್ ಅವರು ರಕ್ತದಾನಿ ಮಾಡಿ ಇತರರಿಗೆ ರಕ್ತ ದಾನಕ್ಕೆ ಪ್ರೇರಣೆ ನೀಡಿದರು.

MGNVY ಕ್ರಿಯಾಯೋಜನೆ ಸಿದ್ಧಪಡಿಸದ ಅಧಿಕಾರಿಗಳ ವಿರುದ್ಧ ಕ್ರಮ: ಸಚಿವ ಬಿಎಸ್ ಸುರೇಶ್ ಎಚ್ಚರಿಕೆ

ಸಾಗರದಲ್ಲಿ ‘ಸದಾನಂದ ಮರ್ಡರ್’ ಕೇಸ್: ಪೊಲೀಸರು ‘ಕೊಲೆ ಆರೋಪಿ’ಗಳನ್ನು ಬಿಟ್ಟು ಕಳುಹಿಸಿದ್ದು ಯಾಕೆ.?

Share. Facebook Twitter LinkedIn WhatsApp Email

Related Posts

ಅಡಿಕೆ ಧಾರಣೆ: ಶಿವಮೊಗ್ಗ ಮತ್ತು ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ವಾರದ ಮೊದಲ ದಿನವೇ ಅಡಿಕೆ ಬೆಲೆ ಭಾರಿ ಏರಿಕೆ.!

30/03/2026 5:34 PM3 Mins Read

BREAKING : ಒಬ್ಬ ಶಾಸಕರಿಗೆ 3 ಟಿಕೆಟ್ ಕೊಡುವುದಾಗಿ ‘KSCA’ ಒಪ್ಪಿಗೆ : ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

30/03/2026 5:17 PM1 Min Read

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಪಂಚ ಗ್ಯಾರಂಟಿಗಳಿಗಾಗಿ 524.14 ಕೋಟಿ ವ್ಯಯ: MLC ದಿನೇಶ್ ಗೂಳಿಗೌಡ

30/03/2026 4:51 PM3 Mins Read
Recent News

ಬಂತು ‘ಡೆಂಗ್ಯೂ ಲಸಿಕೆ’: ಭಾರತದಲ್ಲಿ ಜಪಾನ್‌ನ ‘ಟಕೆಡಾ’ ಲಸಿಕೆ ತುರ್ತು ಬಳಕೆಗೆ ತಜ್ಞರ ಸಮಿತಿ ಒಪ್ಪಿಗೆ! Dengue Vaccine

30/03/2026 5:45 PM

ಅಡಿಕೆ ಧಾರಣೆ: ಶಿವಮೊಗ್ಗ ಮತ್ತು ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ವಾರದ ಮೊದಲ ದಿನವೇ ಅಡಿಕೆ ಬೆಲೆ ಭಾರಿ ಏರಿಕೆ.!

30/03/2026 5:34 PM

Good News ; ಸಾಲಗಾರರಿಗೆ ಭರ್ಜರಿ ಗುಡ್ ನ್ಯೂಸ್ ; 6 ತಿಂಗಳವರೆಗೆ ‘EMI ಪಾವತಿ’ ವಿನಾಯಿತಿಗೆ ಸರ್ಕಾರ ನಿರ್ಧಾರ!

30/03/2026 5:20 PM

BREAKING : ಒಬ್ಬ ಶಾಸಕರಿಗೆ 3 ಟಿಕೆಟ್ ಕೊಡುವುದಾಗಿ ‘KSCA’ ಒಪ್ಪಿಗೆ : ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

30/03/2026 5:17 PM
State News
KARNATAKA

ಅಡಿಕೆ ಧಾರಣೆ: ಶಿವಮೊಗ್ಗ ಮತ್ತು ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ವಾರದ ಮೊದಲ ದಿನವೇ ಅಡಿಕೆ ಬೆಲೆ ಭಾರಿ ಏರಿಕೆ.!

By kannadanewsnow0930/03/2026 5:34 PM KARNATAKA 3 Mins Read

ಬೆಂಗಳೂರು: ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಮಾರುಕಟ್ಟೆ ದರದಲ್ಲಿ ಇಂದು ಮಹತ್ವದ ಬದಲಾವಣೆ ಕಂಡುಬಂದಿದೆ. ವಿಶೇಷವಾಗಿ ಶಿವಮೊಗ್ಗ ಮತ್ತು…

BREAKING : ಒಬ್ಬ ಶಾಸಕರಿಗೆ 3 ಟಿಕೆಟ್ ಕೊಡುವುದಾಗಿ ‘KSCA’ ಒಪ್ಪಿಗೆ : ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

30/03/2026 5:17 PM

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಪಂಚ ಗ್ಯಾರಂಟಿಗಳಿಗಾಗಿ 524.14 ಕೋಟಿ ವ್ಯಯ: MLC ದಿನೇಶ್ ಗೂಳಿಗೌಡ

30/03/2026 4:51 PM

ಜಾನಪದ ಸಂಗೀತವೇ ಎಲ್ಲ ಕಲೆಗಳಿಗೆ ಮೂಲ: ಕಾಂತಾರ ಸಿನಿಮಾ ಗಾಯಕ ವೆಂಕಟೇಶ್ ಡಿ.ಸಿ

30/03/2026 4:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.