ಬೆಂಗಳೂರು: ನಾಳೆ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ ಪರೇಡ್ ಮೈದಾನದಿಂದ ಬೆಂಗಳೂರಿನಲ್ಲಿ ನಡೆಯಲಿರುವ TCS ವರ್ಲ್ಡ್ 10K ರನ್‌ ಪ್ರಯುಕ್ತ ಸಾರ್ವಜನಿಕರಿಗೆ ಭಾಗವಹಿಸಲು ಅನುಕೂಲವಾಗುವಂತೆ ನಮ್ಮ ಮೆಟ್ರೋ ರೈಲು ಸೇವೆಯನ್ನು 07:00 ಗಂಟೆಗೆ ಬದಲಾಗಿ ಮುಂಜಾನೆ 03:35 ಗಂಟೆಗೆ ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ, ನಾಗಸಂದ್ರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ, ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳಿಂದ ಪ್ರಾರಂಭವಾಗುತ್ತದೆ. ರೈಲುಗಳು ಮುಂಜಾನೆ 03.35 ರಿಂದ 04.25 ಗಂಟೆಯ ಸಮಯದಲ್ಲಿ 10 ನಿಮಿಷಗಳ ಆವರ್ತನದಲ್ಲಿ ಚಲಿಸುತ್ತವೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಂ.ಜಿ ರಸ್ತೆ ಕಡೆಗೆ ಮೊದಲ ರೈಲು ಸೇವೆಯು ಬೆಳಿಗ್ಗೆ 04.10 ಗಂಟೆಗೆ ಪ್ರಾರಂಭವಾಗಿ ತದನಂತರ 10 ನಿಮಿಷಗಳ ಆವರ್ತನದಲ್ಲಿ ಬೆಳಿಗ್ಗೆ 5.00 ಗಂಟೆಯವರೆಗೆ ಚಲಿಸುತ್ತವೆ. ತರುವಾಯ ರೈಲುಗಳು ಜನರ ದಟ್ಟಣೆಯ ಅನುಗುಣವಾಗಿ ಚಲಿಸುತ್ತವೆ.

ವರ್ಲ್ಡ್ಸ್ ಪ್ರೀಮಿಯರ್ 10K ಓಟದಲ್ಲಿ ಭಾಗವಹಿಸಲು ಮೇಲಿನ ಸೌಲಭ್ಯವನ್ನು ಬಳಸಿಕೊಳ್ಳುವಂತೆ ವಿನಂತಿಸಲಾಗಿದೆ. ಸಾರ್ವಜನಿಕರು ನಗದು ರಹಿತ QR ಟಿಕೆಟ್‌ಗಳನ್ನು ಖರೀದಿಸಿ ಪ್ರಯಾಣಿಸುವಂತೆ ಬಿ.ಎಂ.ಆರ್.ಸಿ.ಎಲ್ ಕೋರಿದೆ.

ಕೋಲಾರದಲ್ಲಿ EVM ಸಾಗಿಸುತ್ತಿದ್ದ ವಾಹನದ ಟೈರ್ ಸ್ಪೋಟ: ರಸ್ತೆಯಲ್ಲೇ ರಿಪೇರಿ, ಬಿಗಿ ಭದ್ರತೆ

ಕೋಲಾರದಲ್ಲಿ EVM ಸಾಗಿಸುತ್ತಿದ್ದ ವಾಹನದ ಟೈರ್ ಸ್ಪೋಟ: ರಸ್ತೆಯಲ್ಲೇ ರಿಪೇರಿ, ಬಿಗಿ ಭದ್ರತೆ

Share.
Exit mobile version