ಕೋಲಾರ: ನಗರದಲ್ಲಿ ಇವಿಎಂ ಸಾಗಿಸುತ್ತಿದ್ದಂತ ವಾಹನವೊಂದು ಟೈಯರ್ ಸ್ಪೋಟಗೊಂಡ ಪರಿಣಾಮ ನಡು ರಸ್ತೆಯಲ್ಲೇ ನಿಲ್ಲುವಂತೆ ಆಗಿದೆ. ಈಗ ರಸ್ತೆಯಲ್ಲೇ ವಾಹನ ರಿಪೇರಿ ಕಾರ್ಯ ನಡೆಯುತ್ತಿದ್ದು, ಪೊಲೀಸರಿಂದ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.

ನಿನ್ನೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಿತು. ಮತದಾನದ ಬಳಿಕ ಇವಿಎಂಗಳನ್ನು ಸಂಗ್ರಹಿಸಲಾಗಿತ್ತು. ಇಂತಹ ಇವಿಎಂಗಳನ್ನು ಮುಳುಬಾಗಿಲಿನಿಂದ ಕೋಲಾರದ ಸ್ಟ್ರಾಂಗ್ ರೂಮಿಗೆ ಕ್ಯಾಂಟರ್ ಮೂಲಕ ಸಾಗಿಸೋ ವ್ಯವಸ್ಥೆ ಮಾಡಲಾಗಿತ್ತು.

ಮುಳುಬಾಗಿಲಿನಿಂದ ಕೋಲಾರಕ್ಕೆ ಕ್ಯಾಂಟರ್ ಮೂಲಕ ಇವಿಎಂ ಸಾಗಿಸುತ್ತಿದ್ದಂತ ಸಂದರ್ಭದಲ್ಲಿ ಕೋಲಾರ ತಾಲೂಕಿನ ವಡಗೂರ್ ಗೇಟ್ ಬಳಿಯಲ್ಲಿ ಟೈಯರ್ ಬ್ಲಾಸ್ಟ್ ಆಗಿ ನಡು ರಸ್ತೆಯಲ್ಲೇ ನಿಲ್ಲುವಂತೆ ಆಗಿದೆ. ಹೀಗಾಗಿ ಸುಮಾರು 1 ಗಂಟೆಗಳ ಕಾಲ ವಾಹನ ರಸ್ತೆಯಲ್ಲೇ ನಿಲ್ಲುವಂತಾಗಿದ್ದು, ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ.

ಕ್ಯಾಂಟರ್ ಸೀಲ್ ಮಾಡಿರುವುದರಿಂದ ವಾಹನ ರಿಪೇರಿಯಾದ ನಂತ್ರ ಸ್ಟ್ರಾಂಗ್ ರೂಮಿಗೆ ರವಾನ ಮಾಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ವಾಹನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸ್ಥಳದಲ್ಲೇ ತಹಶೀಲ್ದಾರ್, ಪೊಲೀಸ್ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ.

BREAKING : ಕೆಂಪು ಸಮುದ್ರದಲ್ಲಿ ಯೆಮೆನ್ ಹೌತಿಗಳಿಂದ ‘ಆಂಡ್ರೊಮಿಡಾ ಸ್ಟಾರ್ ತೈಲ ಟ್ಯಾಂಕರ್’ ಮೇಲೆ ಕ್ಷಿಪಣಿ ದಾಳಿ!

ಇನ್ಮುಂದೆ ವರ್ಷಕ್ಕೆ ಎರಡು ಬಾರಿ ‘CBSE’ ಬೋರ್ಡ್ ಪರೀಕ್ಷೆ : ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ

Share.
Exit mobile version