ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೋವಿಡ್ ( Covid19 ) ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 1073 ಮಂದಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ.

ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಬಾಗಲಕೋಟೆ, ಬೆಳಗಾವಿ, ದಾವಣಗೆರೆ, ಕಲಬುರ್ಗಿ, ಕೊಪ್ಪಳ, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೋನಾ ದೃಢಪಟ್ಟಿರೋದಾಗಿ ತಿಳಿಸಿದೆ.

BIG NEWS: ಸಂಸದ ಪ್ರತಾವ್ ಸಿಂಹ 17 ಸಿಡಿಗಳು ನನ್ನ ಬಳಿ ಇವೆ – ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೊಸ ಬಾಂಬ್

ಬೀದರ್, ಧಾರವಾಡ, ಹಾಸನ, ಹಾವೇರಿ ಮತ್ತು ಕೋಲಾರ ಜಿಲ್ಲೆಯಲ್ಲಿ ತಲಾ ಇಬ್ಬರಿಗೆ, ಬಳ್ಳಾರಿ 09, ಚಿಕ್ಕಮಗಳೂರು 03, ದಕ್ಷಿಣ ಕನ್ನಡ 10, ಮೈಸೂರು 12, ತುಮಕೂರು 08, ಉಡುಪಿ 04 ಮತ್ತು ಬೆಂಗಳೂರು ನಗರ 1008 ಸೇರಿದಂತೆ 1073 ಮಂದಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 39,70,484 ಗೆ ಏರಿದೆ. ಇವರಲ್ಲಿ 834 ಸೇರಿದಂತೆ 39,24,232 ಮಂದಿ ಗುಣಮುಖರಾದ ಕಾರಣ, ಈಗ 6134 ಸಕ್ರೀಯ ಸೋಂಕಿತರು ಇರೋದಾಗಿ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಸೋಂಕಿನಿಂದಾಗಿ ಓರ್ವ ಸಾವನ್ನಪ್ಪಿದ್ದಾರೆ. ಈ ಮೂಲಕ ಕಿಲ್ಲರ್ ಕೊರೋನಾಗೆ ರಾಜ್ಯದಲ್ಲಿ ಈವರೆಗೆ ಬಲಿಯಾದವರ ಸಂಖ್ಯೆ 40,076ಕ್ಕೆ ಏರಿಕೆಯಾಗಿದೆ.

ದತ್ತ ಪೀಠದ ಕುರಿತ ಸಂಪುಟ ತೀರ್ಮಾನ ಸುದೀರ್ಘ ಹೋರಾಟಕ್ಕೆ ಸಿಕ್ಕಿದ ಗೆಲುವು – ಸಿ.ಟಿ.ರವಿ

Share.
Exit mobile version