ಮೈಸೂರು: ನಾನು ನಿಮ್ಮಂತ ಅಶ್ಲೀಸ ಸಿಡಿಯನ್ನು ಯಾರಾದ್ರೂ ಬಿಡುಗಡೆ ಮಾಡಬಾರದು ಅಂತ ಕೋರ್ಟ್ ನಿಂದ ತಡೆಯಾಜ್ಞೆ ತಂದಿಲ್ಲ. ನಿಮ್ಮ ಅಶ್ಲೀಸ 17 ಎಪಿಸೋಡ್ ಸಿಡಿಗಳು ನನ್ನ ಬಳಿ ಇದ್ದಾವೆ ಎಂಬುದಾಗಿ ಸಂಸದ ಪ್ರತಾಪ್ ಸಿಂಹ ( MP Prathap Simha ) ಬಗ್ಗೆ ಸ್ಪೋಟಕ ಬಾಂಬ್ ಅನ್ನು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದ್ದಾರೆ.

GST ತೆರಿಗೆ ವಿಧಾನವನ್ನು ಸಮರ್ಥವಾಗಿ ನಿಭಾಯಿಸಿರುವ ರಾಜ್ಯ ಕರ್ನಾಟಕ – ಸಿಎಂ ಬೊಮ್ಮಾಯಿ

ಇಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಂಸದ ಪ್ರತಾಪ್ ಸಿಂಹ ಅವರೇ ನಿಮ್ಮಂತೆ ನಾನು ಯಾರೂ ಅಶ್ಲೀಲ ಸಿಡಿ ಬಿಡುಗಡೆ ಮಾಡಬಾರದು ಅಂತ ಕೋರ್ಟ್ ನಿಂದ ತಡೆಯಾಜ್ಞೆ ತಂದಿಲ್ಲ. ನೀವು ಪ್ರಾಮಾಣಿಕರೇ ಆಗಿದ್ರೇ.. ತಡೆಯಾಜ್ಞೆ ರದ್ದುಗೊಳಿಸಿ ಎಂದರು.

ನನ್ನ ಬಳಿ ನಿಮ್ಮ 17 ಎಪಿಸೋಡ್ ಸಿಡಿಗಳಿವೆ. ಹೆಣ್ಣು ಮಕ್ಕಳನ್ನು ಯಾವ ರೀತಿ ನೀವು ಬಳಸಿಕೊಂಡಿದ್ದೇರಿ ಎಂಬುದನ್ನು ಜನರಿಗೆ ತೋರಿಸುತ್ತೇನೆ. ನೀವು ಪ್ರಾಮಾಣಿಕರೇ ಆಗಿದ್ದರೇ, ಕೋರ್ಟ್ ತಡೆಯಾಜ್ಞೆ ತೆಗೆಯಿರಿ ಎಂದು ಹೇಳಿದರು.

BIG NEWS: ಆದಾಯ ಮೀರಿ ಶೇ.53.58ರಷ್ಟು ಅಕ್ರಮ ಆಸ್ತಿ: ಈ ಅಧಿಕಾರಿಗೆ ಕೋರ್ಟ್ ಕೊಟ್ಟ ಶಿಕ್ಷೆ ಏನ್ ಗೊತ್ತಾ.?

ನಾನು ನಿಮ್ಮಂತೆ ಒಂದು ರೂಪಾಯಿ ಮಾನನಷ್ಟ ಮೊಕದಮ್ಮೆ  ಹಾಕಿಸಿಕೊಂಡಿಲ್ಲ. ನಿಮ್ಮ ಹಾಗೇ ಹೆಂಡತಿಯನ್ನು ತಂಗಿ ಅಂತ ಹೇಳಿ ಮುಡಾ ಸೈಟ್ ಕೂಡ ಪಡೆದಿಲ್ಲ ಎಂಬುದಾಗಿ ಹೇಳಿದರು.

Share.
Exit mobile version