Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸುದ್ದಿ : `SSC’ಯಿಂದ 20,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | SSC Recruitment 2025

04/07/2025 5:42 AM

ನಿಮ್ಮ ಬೋಳು ತಲೆಯ ಮೇಲೆ ಕೂದಲು ಬೇಕಾ.?! ಹಾಗಾದ್ರೆ, ಹೀಗೆ ಮಾಡಿ.!

03/07/2025 10:02 PM

‘ಮಳೆನೀರು’ ಕುಡಿಯುವುದು ಒಳ್ಳೆಯದೇ.? ತಜ್ಞರು ಹೇಳುವುದೇನು ಗೊತ್ತಾ.?

03/07/2025 9:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ಮುಜರಾಯಿ ಆಸ್ತಿ ರಕ್ಷಣೆಗೆ ಮಹತ್ವದ ಕ್ರಮ: 10,700 ಎಕರೆ ಭೂಮಿ ತೆರವುಗೊಳಿಸಿ ಸಂರಕ್ಷಣೆ
KARNATAKA

ರಾಜ್ಯ ಸರ್ಕಾರದಿಂದ ಮುಜರಾಯಿ ಆಸ್ತಿ ರಕ್ಷಣೆಗೆ ಮಹತ್ವದ ಕ್ರಮ: 10,700 ಎಕರೆ ಭೂಮಿ ತೆರವುಗೊಳಿಸಿ ಸಂರಕ್ಷಣೆ

By kannadanewsnow0902/01/2025 4:01 PM

ಬೆಂಗಳೂರು: ರಾಜ್ಯ ಸರ್ಕಾರದಿಂದ ಮುಜರಾಯಿ ಆಸ್ತಿ ರಕ್ಷಣೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಪರಿಣಾಮ 10,700 ಎಕರೆ ಭೂಮಿಯನ್ನು ತೆರವುಗೊಳಿಸಿ ಸಂರಕ್ಷಣೆ ಮಾಡಲಾಗಿದೆ.

ಈ ಬಗ್ಗೆ ರಾಜ್ಯ ಸರ್ಕಾರದಿಂದ ಮಾಹಿತಿ ಹಂಚಿಕೊಳ್ಳಲಾಗಿದ್ದು, ಮುಜರಾಯಿ ಆಸ್ತಿ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹಲವೆಡೆ ಖಾಸಗಿಯವರು, ವಿವಿಧ ಟ್ರಸ್ಟ್‌ ಹಾಗೂ ಸಂಘಸಂಸ್ಥೆಗಳು ಅತಿಕ್ರಮಿಸಿಕೊಂಡಿದ್ದ ಮುಜರಾಯಿ ಇಲಾಖೆ ಅಧೀನಕ್ಕೆ ಸೇರಿದ್ದ ಸುಮಾರು 10,700 ಎಕರೆ ಭೂಮಿಯನ್ನು ತೆರವುಗೊಳಿಸಿ ಸಂರಕ್ಷಿಸಲಾಗಿದೆ ಎಂದಿದೆ.

ರಾಜ್ಯ ಸರ್ಕಾರವು ಮುಜರಾಯಿ ಆಸ್ತಿ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹಲವೆಡೆ ಖಾಸಗಿಯವರು, ವಿವಿಧ ಟ್ರಸ್ಟ್‌ ಹಾಗೂ ಸಂಘಸಂಸ್ಥೆಗಳು ಅತಿಕ್ರಮಿಸಿಕೊಂಡಿದ್ದ ಮುಜರಾಯಿ ಇಲಾಖೆ ಅಧೀನಕ್ಕೆ ಸೇರಿದ್ದ ಸುಮಾರು 10,700 ಎಕರೆ ಭೂಮಿಯನ್ನು ತೆರವುಗೊಳಿಸಿ ಸಂರಕ್ಷಿಸಲಾಗಿದೆ.@CMofKarnataka @siddaramaiah @RLR_BTM pic.twitter.com/6qIUG2vrsk

— DIPR Karnataka (@KarnatakaVarthe) January 2, 2025

ಇನ್ನೂ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ಹಂಚಿಕೊಂಡಿದ್ದು, ದೇಶದ ಸ್ವಾತಂತ್ರ್ಯದ 77 ವರುಷಗಳ ಸುದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಕ್ರಮ- ಹಿಂದೂ ದೇವಾಲಯಗಳ ಆಸ್ತಿ ರಕ್ಷಣೆಗೆ ಮಹತ್ವದ ಕ್ರಮವನ್ನು ಸರ್ಕಾರ ವಹಿಸಿದೆ. ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಧಾರ್ಮಿಕ ಬದ್ಧತೆ – ಉಳಿಯಿತು 10,700 ಎಕರೆ ‘ದೇವರ ಸ್ವತ್ತು ಎಂದಿದ್ದಾರೆ.

ಬುಟಾಟಿಕೆ ಮತ್ತು ಪೊಳ್ಳು ಹಿಂದುತ್ವವಾದ ಪ್ರತಿಪಾದಕರಾದ ಬಿ.ಜೆ.ಪಿ ಯವರು ಧರ್ಮ ಧರ್ಮಗಳ‌ ನಡುವೆ ದ್ವೇಷದ ಬೆಂಕಿ ಹಚ್ಚಿ, ಹಿಂದೂ ಧರ್ಮದ ಉಳಿವಿಗಾಗಿ ಯಾವುದೇ ಕಾರ್ಯ ಮಾಡದಿದ್ದರೂ, ಬರೀ ಬಾಯಿ ಮಾತಿನಲ್ಲಿ ಹಿಂದೂ ಧರ್ಮ, ದೇವಾಲಯಗಳ ಬಗ್ಗೆ ಪುಂಖಾನುಪುಂಖವಾಗಿ ಬೊಗಳೆ ಭಾಷಣ ಮಾಡುವವರ ಮುಂದೆ ಯಾವುದೇ ಸದ್ದುಗದ್ದಲವಿಲ್ಲದೆ ತಮ್ಮ‌ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಮೂಲಕ ಹಿಂದೂ ಧರ್ಮ ಮತ್ತು ದೇವಾಲಯಗಳ ರಕ್ಷಣೆಗೆ ಪಣ ತೊಟ್ಟಿರುವ ರಾಮಲಿಂಗಾರೆಡ್ಡಿಯವರ ಕಾರ್ಯ ಆಸ್ತಿಕ ಸಮುದಾಯದಲ್ಲಿ ಸಂತೋಷದ ಹೊನಲನ್ನು‌ ಹರಿಸಿದೆ ಎಂದು ತಿಳಿಸಿದ ಅರ್ಚಕ ಸಮುದಾಯ.

ರಾಜ್ಯದ ಮುಜರಾಯಿ ದೇವಸ್ಥಾನದ ವ್ಯಾಪ್ತಿಯಲ್ಲಿ ಬರುವ ಸಾವಿರಾರು ಎಕರೆ ಜಮೀನು ಅನ್ಯರ ಪಾಲಾಗಿತ್ತು. ಕೆಲ ಸಂಸ್ಥೆಗಳು, ಟ್ರಸ್ಟ್ ಗಳು ಹಾಗೂ ಖಾಸಗಿ ವ್ಯಕ್ತಿಗಳು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ಹಿಂದಿನ ಬಿಜೆಪಿ ಸರಕಾರ ತೆರವು ಮಾಡುವ ಕಡೆ ಯಾವುದೇ ಒಲವು ತೋರಲಿಲ್ಲ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಜರಾಯಿ ಇಲಾಖೆ ಖಾತೆಯನ್ನು ವಹಿಸಿಕೊಂಡ ರಾಮಲಿಂಗಾ ರೆಡ್ಡಿ ಅವರ ಬದ್ಧತೆಯಿಂದ ಈವರೆಗೆ ರಾಜ್ಯದ ವಿವಿಧ ದೇವಸ್ಥಾನಗಳ 10,700 ಎಕರೆ ಜಮೀನನ್ನು ರಕ್ಷಣೆ ಮಾಡಲಾಗಿದೆ. ಒಟ್ಟು 5022 ಆಸ್ತಿಗಳಿಗೆ ಕಂದಾಯ ಇಲಾಖೆಯಿಂದ ಸೂಕ್ತ ದಾಖಲೆಗಳನ್ನು ಸೃಷ್ಟಿಸಿ, ದೇವಸ್ಥಾನಗಳ ಅಧೀನಕ್ಕೆ ನೀಡಲಾಗಿದೆ.

ಒತ್ತುವರಿ ತೆರವುಗೊಳಿಸಿದ ಮುಜರಾಯಿ ಇಲಾಖೆ:

ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ 34,564 ದೇವಸ್ಥಾನಗಳ ಪೈಕಿ ಬಹುತೇಕ ದೇವಸ್ಥಾನಗಳಿಗೆ ಸರಕಾರ ಮತ್ತು ದಾನಿಗಳು ನೀಡಿದ ಆಸ್ತಿಯಿದೆ. ಆದರೆ, ಬಹುತೇಕ ದೇವಸ್ಥಾನಗಳ ಆಸ್ತಿ ಖಾಸಗಿ ಪಾಲಾಗಿತ್ತು. ಇದೀಗ ಸರ್ವೆ ನಡೆಸಿ, ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಆಸ್ತಿಗಳನ್ನು ಮರು ವಶಪಡಿಸಿಕೊಳ್ಳಲಾಗಿದೆ.

ರಾಜ್ಯದಲ್ಲಿ 34,166 ಸಿ ದರ್ಜೆಯ ದೇವಸ್ಥಾನಗಳು, 193 ಬಿ ದರ್ಜೆಯ ದೇವಸ್ಥಾನ ಹಾಗೂ 205 ‘ಎ’ ದರ್ಜೆಯ ದೇವಸ್ಥಾನಗಳಿವೆ. ಈ ದೇವಸ್ಥಾನಗಳಿಗೆ ಸರ್ಕಾರದಿಂದ ಹಾಗೂ ದಾನಿಗಳಿಂದ ದಾನದ ರೂಪದಲ್ಲಿ ಬಂದ ಸಾವಿರಾರು ಎಕರೆ ಆಸ್ತಿಯಿದೆ. ಆದರೆ, ಈವರೆಗೆ ಆ ಆಸ್ತಿಗಳಿಗೆ ಸೂಕ್ತ ದಾಖಲೆಗಳಿರಲಿಲ್ಲ. ಇದೀಗ ಕಂದಾಯ ಇಲಾಖೆ ಎಲ್ಲ ಆಸ್ತಿಗಳಿಗೆ ದಾಖಲೆ ಒದಗಿಸುವ ಕೆಲಸ ಮಾಡಿದೆ.

ನಮ್ಮ ಸರಕಾರ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ದೇವಸ್ಥಾನಗಳಿಗೆ ಮರಳಿ ಕೊಡಿಸಲಾಗಿದೆ. ದಾಖಲೆಗಳು ಇಲ್ಲದೇ ಇದ್ದ ಜಮೀನುಗಳಿಗೆ ಸೂಕ್ತ ದಾಖಲೆ ಸೃಷ್ಟಿಸಿಕೊಡುವಲ್ಲಿ ಕಂದಾಯ ಇಲಾಖೆ ಯಶಸ್ವಿಯಾಗಿದೆ.

ರಾಜ್ಯದಲ್ಲಿ ಮುಜರಾಯಿ ಆಸ್ತಿಗಳ ಸಂರಕ್ಷಣೆಯನ್ನು ಅಭಿಯಾನ ಮಾದರಿಯಲ್ಲಿ ಕೈಗೊಂಡ ಪರಿಣಾಮ ವರ್ಷದಲ್ಲಿ 5022 ಆಸ್ತಿಗಳನ್ನು ಇಲಾಖೆಯ ವಶಕ್ಕೆ ಪಡೆಯಲಾಗಿದೆ. ಇದಕ್ಕೆ ಸೂಕ್ತ ದಾಖಲೆ ಒದಗಿಸಿದ ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಇಲಾಖೆ ಅಧಿಕಾರಿಗಳಿಗೆ ಮುಜರಾಯಿ ಇಲಾಖೆ ವತಿಯಿಂದ ಧನ್ಯವಾದ ಸಲ್ಲಿಸುತ್ತೇನೆ ಎಂದ ಸಚಿವರು.

ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ, ಆ ಪಕ್ಷದಿಂದ ಮಾಡಲು ಆಗದ ಕೆಲಸವನ್ನು ನಾವು ಮಾಡಿದ್ದೇವೆ. ಧರ್ಮ ಬೇರೆ ರಾಜಕೀಯ ಬೇರೆ, ಧರ್ಮ ಭಾವನೆಗೆ ಸಂಬಂಧಿಸಿದ್ದು ಅದರೊಡನೆ ರಾಜಕೀಯ ಬೆರೆಸಿ, ಕಿಚ್ಚು ಹಚ್ಚಿಸುವ ಕೆಲಸವನ್ನು ಇನ್ನಾದರೂ ಬಿ.ಜೆ.ಪಿ ಅವರು ಬಿಡಬೇಕು ಎಂದು ರಾಮಲಿಂಗಾ ರೆಡ್ಡಿ ಅವರು ತಿಳಿಸಿದರು.

ಹಿಂದೂ ದೇವಾಲಯಗಳನ್ನು ರಕ್ಷಿಸಲು ಇವರ ಅಧಿಕಾರವಧಿಯಲ್ಲಿ ಇವರಿಗೆ ಸಾಧ್ಯವಾಗಲಿಲ್ಲವೇಕೆ? ಕಾಂಗ್ರೆಸ್ ಸರ್ಕಾರವೇ ಬಂದು ಈ ಕ್ರಾಂತಿಕಾರಿ ಬದಲಾವಣೆ‌ ಮಾಡಲೆಂದು ಕಾಯುತ್ತಿದ್ದರೇ ಇವರು ಎಂದು ಕಿಡಿಕಾರಿದರು.

ಮೈಸೂರಿನ KRS ರಸ್ತೆಗೆ ಅಧಿಕೃತ ಹೆಸರು ನೀಡಿರುವ ಉಲ್ಲೇಖಗಳಿಲ್ಲ ಎಂದ ಆಯುಕ್ತರಿಗೆ ಯದುವೀರ್ ಈ ಸ್ಪಷ್ಟನೆ

BREAKING : ಬೆಂಗಳೂರು ಜನತೆಗೆ ಬಿಗ್ ಶಾಕ್ : ನೀರಿನ ದರ ಏರಿಕೆ ಬಹುತೇಕ ಫಿಕ್ಸ್ : ಜ.2ನೇ ವಾರ ದರ ಏರಿಕೆ ಸಾಧ್ಯತೆ!

Share. Facebook Twitter LinkedIn WhatsApp Email

Related Posts

BREAKING: NEET ಶ್ರೇಣಿ ಪಟ್ಟಿ ಪ್ರಕಟಿಸಿದ KEA: ಈ ರೀತಿ ಚೆಕ್ ಮಾಡಿ | NEET Rank

03/07/2025 8:20 PM1 Min Read

ಚಿತ್ರದುರ್ಗ: ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೆ ಹಿರಿಯೂರು 2ನೇ ಸ್ಥಾನ – ಬಿಸಿ ಸಂಜೀವಮೂರ್ತಿ

03/07/2025 4:59 PM2 Mins Read

ರಾಜ್ಯಾದ್ಯಂತ ಏಕಕಾಲಕ್ಕೆ ಕಣ್ಣಿನ ಆರೈಕೆಗೆ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ

03/07/2025 4:33 PM2 Mins Read
Recent News

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸುದ್ದಿ : `SSC’ಯಿಂದ 20,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | SSC Recruitment 2025

04/07/2025 5:42 AM

ನಿಮ್ಮ ಬೋಳು ತಲೆಯ ಮೇಲೆ ಕೂದಲು ಬೇಕಾ.?! ಹಾಗಾದ್ರೆ, ಹೀಗೆ ಮಾಡಿ.!

03/07/2025 10:02 PM

‘ಮಳೆನೀರು’ ಕುಡಿಯುವುದು ಒಳ್ಳೆಯದೇ.? ತಜ್ಞರು ಹೇಳುವುದೇನು ಗೊತ್ತಾ.?

03/07/2025 9:44 PM

BREAKING : ಥೈಲ್ಯಾಂಡ್ ಹಂಗಾಮಿ ಪ್ರಧಾನಿಯಾಗಿ ‘ಫುಮ್ಥಾಮ್’ ನೇಮಕ

03/07/2025 9:21 PM
State News
KARNATAKA

BREAKING: NEET ಶ್ರೇಣಿ ಪಟ್ಟಿ ಪ್ರಕಟಿಸಿದ KEA: ಈ ರೀತಿ ಚೆಕ್ ಮಾಡಿ | NEET Rank

By kannadanewsnow0903/07/2025 8:20 PM KARNATAKA 1 Min Read

ಬೆಂಗಳೂರು: ಪ್ರಸಕ್ತ ಸಾಲಿನ ಯುಜಿನೀಟ್ ಅರ್ಜಿಯಲ್ಲಿ ಕರ್ನಾಟಕ ಎಂದು ನಮೂದಿಸಿ, ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಅರ್ಹತೆ ಪಡೆದ 87,909…

ಚಿತ್ರದುರ್ಗ: ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೆ ಹಿರಿಯೂರು 2ನೇ ಸ್ಥಾನ – ಬಿಸಿ ಸಂಜೀವಮೂರ್ತಿ

03/07/2025 4:59 PM

ರಾಜ್ಯಾದ್ಯಂತ ಏಕಕಾಲಕ್ಕೆ ಕಣ್ಣಿನ ಆರೈಕೆಗೆ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ

03/07/2025 4:33 PM

ಬಿಜೆಪಿಯ ಚೀಫ್ ವಿಪ್ ಹೀಗೆ ಚೀಪ್ ಆಗಿ ಮಾತಾಡ್ತಾನೆ : ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಏಕವಚನದಲ್ಲೇ ವಾಗ್ದಾಳಿ

03/07/2025 4:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.